ಮತ್ತೆ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ್ದಾರೆ ಈ ಹಾಲಿವುಡ್‌ ನಟ; ಐದೇ ದಿನಗಳಲ್ಲಿ 1000 ಕೋಟಿ ರೂ. ಕಲೆಕ್ಷನ್‌ ಮಾಡಿದೆ ʼಮಿಷನ್ ಇಂಪಾಸಿಬಲ್ 7ʼ

ಹಾಲಿವುಡ್‌ನ ಸ್ಟಾರ್‌ ನಟ ಟಾಮ್ ಕ್ರೂಸ್ ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದ್ದಾರೆ. ಟಾಮ್‌ ಕ್ರೂಸ್‌ ನಟನೆಯ ‘ಮಿಷನ್ ಇಂಪಾಸಿಬಲ್ 7’ ಚಿತ್ರ ದಾಖಲೆಯ ಕಲೆಕ್ಷನ್‌ ಮಾಡಿದೆ. ಟಾಮ್ ಕ್ರೂಸ್ ಅವರ ಈ ಹೊಸ ಚಿತ್ರದ ಬಿರುಗಾಳಿಗೆ ಈ ಹಿಂದೆ ತೆರೆಕಂಡ ಚಿತ್ರಗಳು ಕೂಡ ನಲುಗಿ ಹೋಗಿವೆ. ಈ ಚಿತ್ರ ಬಿಡುಗಡೆಯಾಗಿ 6 ​​ದಿನ ಕಳೆದಿದ್ದು, 5ನೇ ದಿನದ ಕಲೆಕ್ಷನ್ ಬೆಚ್ಚಿ ಬೀಳಿಸುವಂತಿದೆ.

ಟಾಮ್ ಕ್ರೂಸ್ ಅವರ ‘ಮಿಷನ್ ಇಂಪಾಸಿಬಲ್ 7’ ಚಿತ್ರದ ಐದನೇ ದಿನದ ಕಲೆಕ್ಷನ್ ಬಿಡುಗಡೆಯಾದ ನಂತರ ಇದುವರೆಗಿನ ಅತ್ಯಧಿಕ ಸಂಗ್ರಹವಾಗಿದೆ. ಈ ಚಿತ್ರ ಭಾನುವಾರ ಅಂದರೆ 5ನೇ ದಿನಕ್ಕೆ ಭಾರತದಲ್ಲಿ ಸುಮಾರು 17 ಕೋಟಿ ಕಲೆಕ್ಷನ್ ಮಾಡಿದೆ. ಕಳೆದ ನಾಲ್ಕು ದಿನಗಳ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಚಿತ್ರ ಮೊದಲ ದಿನ 12 ಕೋಟಿ 3 ಲಕ್ಷ, ಎರಡನೇ ದಿನ 8 ಕೋಟಿ 75 ಲಕ್ಷ, ಮೂರನೇ ದಿನ 9 ಕೋಟಿ 15 ಲಕ್ಷ, ನಾಲ್ಕನೇ ದಿನ 16 ಕೋಟಿ ಬಾಚಿಕೊಂಡಿದೆ.

5ನೇ ದಿನಕ್ಕೆ 17 ಕೋಟಿ ಕಲೆಕ್ಷನ್ ಸೇರಿ ಈ ಚಿತ್ರ ಇದುವರೆಗೆ 5 ದಿನದಲ್ಲಿ ಒಟ್ಟು 63.2 ಕೋಟಿ ಕಲೆಕ್ಷನ್ ಮಾಡಿದೆ. ಟಾಮ್ ಕ್ರೂಸ್ ಅವರ ಈ ಚಿತ್ರ ವಿಶ್ವದಾದ್ಯಂತ ಭರ್ಜರಿ ಗಳಿಕೆ ಮಾಡುತ್ತಿದೆ. ಈ ವೇಗ ನೋಡಿದರೆ ಭಾರತದಲ್ಲಿ ಸದ್ಯದಲ್ಲೇ 100 ಕೋಟಿ ಗಡಿ ದಾಟಲಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್‌ 5 ದಿನಗಳಲ್ಲಿ 1000 ಕೋಟಿ ದಾಟಿದೆ. ‘ಮಿಷನ್ ಇಂಪಾಸಿಬಲ್ 7’ ಚಿತ್ರದ ಅಬ್ಬರದಿಂದಾಗಿ ಬಾಲಿವುಡ್‌ನ ‘ಸತ್ಯಪ್ರೇಮ್ ಕಿ ಕಥಾ’ ಮತ್ತು ‘ಜೀ ಕರ್ದಾ’ ಚಿತ್ರಗಳು ಮಂಕಾಗಿವೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read