ಮತದಾರರಿಗೆ ಹಂಚಲು ನೀಡಿದ್ದ ಹಣ ಹಾಗೆಯೇ ಇಟ್ಟುಕೊಂಡಿದ್ದರೆ ವಾಪಸ್ ನೀಡಿ ಎಂದ ಮಾಜಿ ಸಚಿವ…!

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ನಾರಾಯಣಗೌಡ ಪರಾಭವಗೊಂಡಿದ್ದಾರೆ. ಇದೀಗ ಅವರು ಮತದಾರರಿಗೆ ಹಂಚಲು ಕಾರ್ಯಕರ್ತರಿಗೆ ತಾವು ನೀಡಿದ್ದ ಹಣ ಹಿಂಪಡೆಯಲು ಮುಂದಾಗಿದ್ದಾರೆ.

ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆ ಆರ್ ಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಕರೆದಿದ್ದ ಸಭೆ ವೇಳೆ ನಾರಾಯಣಗೌಡ, ಹಣ ಹಿಂದಿರುಗಿಸುವಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಅಂಗಲಾಚಿದ್ದಾರೆ.

ಮತದಾರರಿಗೆ ಹಂಚಲು ನೀಡಿದ್ದ ಹಣವನ್ನು ಕೆಲವರು ನೀಡದೆ ತಾವೇ ಇಟ್ಟುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗೆ ಮೋಸ ಮಾಡಿದವರು ದಯಮಾಡಿ ನನಗೆ ಆ ಹಣವನ್ನು ವಾಪಸ್ ನೀಡಿ ಎಂದು ನಾರಾಯಣಗೌಡ ಕೇಳಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗೆ ನಾನಾ ಕಾಮೆಂಟುಗಳು ಬರುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read