ಮತದಾನದ ವೇಳೆ ಮತ ಕೇಂದ್ರಗಳಲ್ಲಿ ಮರೆ ಮಾಡಬೇಕಿದೆ ಪೊರಕೆ…..!

ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಮತದಾರರ ಮನವೊಲಿಸಲು ಅಭ್ಯರ್ಥಿಗಳು ಮತದಾನಕ್ಕೂ ಮುನ್ನ ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ಮತದಾನ ಸಂದರ್ಭದಲ್ಲಿ ಮತದಾರರಿಗೆ ಯಾವುದೆ ಆಮಿಷ ಒಡ್ಡದಂತೆ ಹಾಗೂ ಮತ ಕೇಂದ್ರಗಳ ಬಳಿ ತುಂಬಾ ಚಿಹ್ನೆಗಳನ್ನು ಪ್ರದರ್ಶಿಸದಂತೆ ನಿರ್ಬಂಧ ಹೇರಲಾಗಿದ್ದು, ಈಗಾಗಲೇ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ.

ಇದರ ಮಧ್ಯೆ ಆಮ್ ಆದ್ಮಿ ಪಕ್ಷದ ಚಿಹ್ನೆ ಪೊರಕೆಯಾಗಿದ್ದು, ಮತ ಕೇಂದ್ರಗಳಲ್ಲಿ ಇದನ್ನು ಅಡಗಿಸಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ವಚ್ಛತೆಗೆ ಪೊರಕೆ ಅತ್ಯಂತ ಪ್ರಮುಖ ಸಾಧನವಾಗಿದ್ದು, ಮತ ಕೇಂದ್ರಗಳನ್ನು ಗುಡಿಸಿದ ಬಳಿಕ ಇದನ್ನು ಮರೆ ಮಾಡಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read