ಮಗುವನ್ನು ನಗಿಸಲು ಕಚಗುಳಿ ಇಡುತ್ತೀರಾ ? ಇದನ್ಯಾಕೆ ಮಾಡಬಾರದು ಎಂದು ತಿಳಿಯಿರಿ…..!

ಮಗುವನ್ನು ಸಂತೋಷಪಡಿಸಲು ಪೋಷಕರು ಆಗಾಗ ಕಚಗುಳಿ ಇಡುತ್ತಾರೆ. ನಾವು ಕೂಡ ಹಲವು ಬಾರಿ ಈ ರೀತಿ ಮಾಡಿರುತ್ತೇವೆ. ಆದರೆ ಈ ರೀತಿ ಮಗುವಿಗೆ ಕಚಗುಳಿ ಇಡುವುದು ಅಪಾಯಕಾರಿ. ಕಚಗುಳಿಯಲ್ಲೂ ಎರಡು ವಿಧಗಳಿವೆ. ನಿಸ್ಮೆಸಿಸ್ ಮತ್ತು ಗಾರ್ಗಲೆಸಿಸ್. ನಿಸ್ಮೆಸಿಸ್ ಟಿಕ್ಲಿಂಗ್ ವ್ಯಕ್ತಿಯ ಲಘು ಸ್ಪರ್ಶದಿಂದ ಉಂಟಾಗುತ್ತದೆ. ಗಾರ್ಗಲೆಸಿಸ್‌ನಲ್ಲಿ ವ್ಯಕ್ತಿಯು ಜೋರಾಗಿ ನಗುತ್ತಾನೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ ಮಗುವಿಗೆ ಕಚಗುಳಿ ಮಾಡಿದರೆ ನೋವುಂಟಾಗುವ ಸಾಧ್ಯತೆ ಇರುತ್ತದೆ. ಕಚಗುಳಿಯಿಂದ ಮಕ್ಕಳು ಸಾವನ್ನಪ್ಪಿರುವ ಅನೇಕ ಘಟನೆಗಳು ಈಗಾಗ್ಲೇ ಬೆಳಕಿಗೆ ಬಂದಿವೆ. ವಿಪರೀತ ಕಚಗುಳಿ ಇಟ್ಟಾಗ ಮಗುವಿಗೆ ಹಾನಿಯಾಗುತ್ತದೆ. ನೋವು ಉಂಟಾಗುತ್ತದೆ. ಚಿಕ್ಕ ಮಕ್ಕಳಾಗಿರುವುದರಿಂದ ಅದನ್ನು ಹೇಳಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ.

ಟಿಕ್ಲಿಂಗ್ ಸಮಯದಲ್ಲಿ ಅವರು ಎದೆ ಮತ್ತು ಹೊಟ್ಟೆಯ ಅಸ್ವಸ್ಥತೆ ಕಾಡಬಹುದು. ಶಿಶುಗಳಿಗೆ ಅತಿಯಾದ ಕಚಗುಳಿ ಇಡುವುದರಿಂದ ಬಿಕ್ಕಳಿಕೆ ಉಂಟಾಗುತ್ತದೆ. ಮಗು ಅಳಲು ಪ್ರಾರಂಭಿಸುತ್ತದೆ. ಕಚಗುಳಿಯಿಂದ ಮಗುವಿನ ಅಂಗಗಳ ಮೇಲೆ ಬಲವಾದ ಆಘಾತವಾಗುತ್ತದೆ. ಮಗುವಿನ ಬಾಹ್ಯ ಮತ್ತು ಆಂತರಿಕ ಅಂಗಗಳಿಗೆ ಗಾಯವಾಗಬಹುದು. ಮಕ್ಕಳು ಇದನ್ನೆಲ್ಲ ಹೇಳಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಪೋಷಕರೇ ಅದನ್ನು ಅರಿತುಕೊಂಡು ಕಚಗುಳಿ ಮಾಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read