ಮಗಳ ಮದುವೆಯನ್ನು ಅದ್ದೂರಿಯಾಗಿ ಸ್ಮಶಾನದಲ್ಲಿ ನೆರವೇರಿಸಿದ ತಂದೆ…!

ಮುಂಬೈ: ಮದುವೆಗೂ ಮಸಣಕ್ಕೂ ಎಲ್ಲಿಂದೆಲ್ಲಿಯ ಸಂಬಂಧ….? ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ ತಂದೆಯೊಬ್ಬ ತನ್ನ ಮಗಳ ಮದುವೆಯನ್ನು ಸ್ಮಶಾನದಲ್ಲಿಯೇ ಅದ್ದೂರಿಯಾಗಿ ನೆರವೇರಿಸಿದ್ದಾರೆ.

ಜೋಗಿ ಗಂಗಾಧರ್ ಗಾಯಕವಾಡ್ ಹಾಗೂ ಗಂಗೂಬಾಯಿ ಗಾಯಕವಾಡ ದಂಪತಿ ತಮ್ಮ ಮಗಳ ಮದುವೆಯನ್ನು ಸ್ಮಶಾನದಲ್ಲಿ ಮಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಶಿರಡಿ ಬಳಿಯ ರಹತಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಂಗಾಧರ್ ಸ್ಥಳೀಯ ಚಿತಾಗಾರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತ ಕುಟುಂಬ ಪೋಷಣೆ ಮಾಡುತ್ತಾರೆ. ಹಲವು ವರ್ಷಗಳಿಂದ ಚಿತಾಗಾರದ ಬಳಿಯೇ ವಾಸವಾಗಿದ್ದಾರೆ. ಇವರ ಕಿರಿಯ ಮಗಳು ಮಯೂರಿ ಶಿರಡಿಯ ಮನೋಜ್ ಜೈಸ್ವಾಲ್ ಎಂಬಾತನನ್ನು ಪ್ರೀತಿಸಿದ್ದು, ಅಂತರ್ಜಾತಿ ವಿವಾಹವಾದರೂ ಎರಡೂ ಕುಟುಂಬದವರು ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಗಂಗಾಧರ್ ಗೆ ತನ್ನ ಮಗಳು ಎಲ್ಲಿ ಬೆಳೆದಳೋ ಅಲ್ಲಿಯೇ ಅದ್ದೂರಿ ವಿವಾಹವಾಗಬೇಕು ಎಂಬ ಆಸೆ. ಹಾಗಾಗಿ ಗಂಗಾಧರ್ ತಾವಿರುವ ಸ್ಮಶಾನದ ಬಳಿಯಲ್ಲಿಯೇ ಮಗಳ ಮದುವೆಯನ್ನು ಭರ್ಜರಿಯಾಗಿ ನೆರವೇರಿಸಿದ್ದಾರೆ. ಈ ವಿಭಿನ್ನ ಮದುವೆಗೆ ಎರಡೂ ಕುಟುಂಬದ ಬಂಧುಗಳು ಬಂದು ನವದಂಪತಿಗೆ ಆಶೀರ್ವಾದ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read