ಮಕ್ಕಳ ಬಾಯಲ್ಲಿ ನೀರೂರಿಸುವ ವೆಜಿಟಬಲ್ ಚೀಸ್ ದೋಸೆ

ದೋಸೆ ಅಂದ್ರೆ ಸಾಕು ಯಾರಿಗೆ ತಾನೆ ಇಷ್ಟ ಆಗೋಲ್ಲಾ ಹೇಳಿ. ಎಲ್ಲಾ ವಯಸ್ಸಿನವರೂ ಇಷ್ಟಪಡುವ ದಕ್ಷಿಣ ಭಾರತೀಯ ಖಾದ್ಯ. ಇತ್ತೀಚೆಗಂತೂ ವೆರೈಟಿ ದೋಸೆಗಳು ಜನಪ್ರಿಯವಾಗಿವೆ. ಮಕ್ಕಳಿಗೆ ಹಾಗೆ ದೋಸೆ ಕೊಡುವುದಕ್ಕಿಂತ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ.

ನಿಮ್ಮ ದೋಸೆಗೆ ಚೀಸ್ ಮತ್ತು ತರಕಾರಿಗಳನ್ನು ಉಪಯೋಗಿಸಿ ಒಂದು ಟ್ವಿಸ್ಟ್ ಕೊಟ್ಟು ನೋಡಿ. ಈ ಚೀಸ್ ಲೋಡ್ ವೆರೈಟಿ ದೋಸೆಯನ್ನು ನಿಮ್ಮ ಮನೆಮಂದಿಗೆಲ್ಲಾ ಮಾಡಿಕೊಟ್ಟು ಅವರ ಮೆಚ್ಚುಗೆಗೆ ಪಾತ್ರರಾಗಿ.

ಬೇಕಾಗುವ ಸಾಮಗ್ರಿಗಳು : ರುಬ್ಬಿದ ದೋಸೆ ಹಿಟ್ಟು – 1 ಕೆಜಿ, ಸ್ಪ್ರಿಂಗ್ ಆನಿಯನ್ಸ್- 50 ಗ್ರಾಂ, ಚೀಸ್- 4 ಚಮಚ, ಕ್ಯಾಪ್ಸಿಕಂ- 2, ಕತ್ತರಿಸಿದ ಕ್ಯಾರೆಟ್- 2 , ಟೊಮೇಟೋ- 1, ರಿಫೈಂಡ್ ಎಣ್ಣೆ – 3 ಚಮಚ.

ಮಾಡುವ ವಿಧಾನ :

ಒಂದು ಪ್ಯಾನ್ ಗೆ 2 ಚಮಚ ಎಣ್ಣೆಯನ್ನು ಹಾಕಿ, ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಕ್ಯಾಪ್ಸಿಕಂ, ಸ್ಪ್ರಿಂಗ್ ಆನಿಯನ್ಸ್, ಕ್ಯಾರೆಟ್ ಮತ್ತು ಟೊಮೇಟೋಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಮೀಡಿಯಂ ಫ್ಲೇಮ್ ನಲ್ಲಿ ನಾನ್ ಸ್ಟಿಕ್ ತವಾವನ್ನು ಬಿಸಿ ಮಾಡಿಕೊಳ್ಳಿ. ನಂತರ ದೋಸೆ ಹಿಟ್ಟನ್ನು ವೃತ್ತಾಕಾರದಲ್ಲಿ ಹರಡಿ, ಅಂಚುಗಳಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ. ಫ್ರೈ ಮಾಡಿಕೊಂಡ ಮಿಶ್ರಣವನ್ನು ದೋಸೆಯ ಮೇಲೆ ಹರಡಿ, ನಂತರ ಇದರ ಮೇಲೆ ಕ್ರೀಮೀ ಚೀಸ್ ಅನ್ನು ಸೇರಿಸಿ.

ನಂತರ ದೋಸೆಯನ್ನು ರೋಲ್ ಮಾಡಿ ಎರಡು ತುಂಡುಗಳಾಗುವಂತೆ ಮಧ್ಯಕ್ಕೆ ಕಟ್ ಮಾಡಿ. ಒಂದು ಪ್ಲೇಟ್ ನಲ್ಲಿ ಕಾಯಿ ಚಟ್ನಿ ಅಥವಾ ಪುದೀನಾ ಚಟ್ನಿಯೊಂದಿಗೆ ಸರ್ವ್ ಮಾಡಿ. ಸಂಜೆಯ ಕಾಫಿ , ಚಹಾದೊಂದಿಗೆ ಉತ್ತಮ ಸ್ನಾಕ್ಸ್ ಆಗಿ ಸವಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read