ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ‘ಕಾರ್ನ್ ಆಲೂ’ ಬರ್ಗರ್ ಮಾಡುವ ವಿಧಾನ

ಬರ್ಗರ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ತಿಂಡಿಗಳಲ್ಲಿ ಬರ್ಗರ್ ಕೂಡ ಒಂದು. ಆರೋಗ್ಯಕರ ಕಾರ್ನ್, ಆಲೂ ಬರ್ಗರ್ ಮಾಡಿ ಮಕ್ಕಳಿಗೆ ಸರ್ಫ್ರೈಸ್ ಕೊಡಿ.

ಕಾರ್ನ್ ಆಲೂ ಬರ್ಗರ್ ಮಾಡಲು ಬೇಕಾಗುವ ಪದಾರ್ಥ:

ಒಂದು ಕಪ್ ಕಾರ್ನ್

ಮೂರು ಆಲೂಗಡ್ಡೆ (ಬೇಯಿಸಿದ್ದು)

ಎರಡು ಬನ್

ಎರಡು ಟೋಮೋಟೋ ( ಗೋಲವಾಗಿ ಕತ್ತರಿಸಿದ್ದು)

ಒಂದು ಈರುಳ್ಳಿ ( ಗೋಲವಾಗಿ ಕತ್ತರಿಸಿದ್ದು)

ಉಪ್ಪು ರುಚಿಗೆ ತಕ್ಕಷ್ಟು

ಒಂದು ಸಣ್ಣ ಚಮಚ ಕೆಂಪು ಮೆಣಸಿನ ಹುಡಿ

ಒಂದು ಕಪ್ ಬ್ರೆಡ್ ಚೂರು

ಒಂದು ಚಮಚ ಕಾರ್ನ್ ಪುಡಿ

ಒಂದು ಚಮಚ ಹಾಲು

ಒಂದು ಚಮಚ ಟೋಮೋಟೋ ಕೆಚಪ್

ಒಂದು ದೊಡ್ಡ ಚಮಚ ಮೇಯನೇಸ್

ಕರಿಯಲು ಎಣ್ಣೆ ಸ್ವಲ್ಪ

ಕಾರ್ನ್ ಆಲೂ ಬರ್ಗರ್ ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ ಕಾರ್ನ್, ಆಲೂಗಡ್ಡೆ, ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಇನ್ನೊಂದು ಲೋಟಕ್ಕೆ ಹಾಲು ಹಾಗೂ ಕಾರ್ನ್ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಬ್ರೆಡ್ ಚೂರುಗಳನ್ನಿಡಿ. ಮಿಕ್ಸ್ ಮಾಡಿದ ಆಲೂ ಕಾರ್ನ್ ಮಿಶ್ರಣವನ್ನು ಸಣ್ಣದಾಗಿ ಉಂಡೆ ಮಾಡಿ ಟಿಕ್ಕಿ ರೂಪದಲ್ಲಿ ತಯಾರಿಸಿಕೊಳ್ಳಿ. ನಂತ್ರ ಕಾರ್ನ್ ಹಾಲಿನಲ್ಲಿ ಅದ್ದಿ ನಂತ್ರ ಅದ್ರ ಮೇಲೆ ಬ್ರೆಡ್ ಚೂರನ್ನು ಉದುರಿಸಿ.

ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಕಾರ್ನ್ ಆಲೂ ಟಿಕ್ಕಿಯನ್ನು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ನಂತ್ರ ಬನ್ ತೆಗೆದುಕೊಂಡು ಮಧ್ಯ ಭಾಗಕ್ಕೆ ಕತ್ತರಿಸಿ. ಕತ್ತರಿಸಿದ ಬನ್ ಮೇಲೆ ಕಾರ್ನ್ ಆಲೂ ಟಿಕ್ಕಿ ಇಡಿ. ಅದ್ರ ಮೇಲೆ ಕತ್ತರಿಸಿದ ಟೋಮೋಟೋ, ಈರುಳ್ಳಿ ನಂತ್ರ ಟೋಮೋಟೋ ಕೆಚಪ್, ಮೇಯನೇಸ್ ಹಾಕಿ ಬರ್ಗರ್ ಮುಚ್ಚಿ. ಮಕ್ಕಳಿಗೆ ರುಚಿ ರುಚಿ ಕಾರ್ನ್ ಆಲೂ ಬರ್ಗರ್ ಸವಿಯಲು ಸಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read