ಮಕ್ಕಳಿಗೆ ಹಾಲೂಡಿಸುವ ತಾಯಂದಿರು ತಪ್ಪದೆ ಇದನ್ನು ಸೇವಿಸಿ…!

ಮಕ್ಕಳಿಗೆ ಹಾಲೂಡಿಸುವ ತಾಯಂದಿರು ಈ ಕೆಲವು ವಸ್ತುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ತಾಯಿಯಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಿ ಹಾಲಿನ ಪ್ರಮಾಣವನ್ನು ಹೆಚ್ಚಿಸುವ ಆಹಾರಗಳಿವು.

ನವಜಾತ ಮಗುವಿನ ತಾಯಂದಿರು ಪಾಲಕ್ ಸೊಪ್ಪು ಮತ್ತು ಕ್ಯಾರೆಟ್ ಅನ್ನು ನಿತ್ಯ ಸೇವಿಸಬೇಕು. ಇದರಿಂದ ಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಎ ದೊರೆಯುತ್ತದೆ. ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ತಾಯಿಯ ಆರೋಗ್ಯದ ಚೇತರಿಕೆಗೂ ನೆರವಾಗುತ್ತದೆ.

ಒಮೆಗಾ 3 ಕೊಬ್ಬಿನಾಮ್ಲದ ಜೊತೆಗೆ ಹೇರಳವಾದ ಪ್ರೊಟೀನ್ ಅನ್ನು ಒಳಗೊಂಡಿರುವ ಮೀನಿನ ಸೇವನೆಯಿಂದ ನರಮಂಡಲದ ಬೆಳವಣಿಗೆಯೂ ಚುರುಕು ಪಡೆದುಕೊಳ್ಳುತ್ತದೆ.

ಕಿತ್ತಳೆ ಹಣ್ಣನ್ನು ನೇರವಾಗಿ ಅಥವಾ ಜ್ಯೂಸ್ ರೂಪದಲ್ಲಿ ಕುಡಿಯುವುದರಿಂದ, ಬಾದಾಮಿ ಮತ್ತು ಗೋಡಂಬಿಯನ್ನು ಸೇವಿಸುವುದರಿಂದ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇವಿಸುವುದರಿಂದ ಮಕ್ಕಳು ಮತ್ತು ತಾಯಿಯ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read