ಮಕರ ಸಂಕ್ರಾಂತಿ ಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿಯಿದೆ. ಇದಕ್ಕೆ ಈಗಾಗಲೇ ತಯಾರಿ ಶುರುವಾಗಿದೆ. ಮನೆಯಲ್ಲಿ ಬೆಲ್ಲದಿಂದ ಸಿಹಿತಿಂಡಿಗಳನ್ನು ತಯಾರಿಸುವುದು ಸಾಮಾನ್ಯ. ಮಕರ ಸಂಕ್ರಾಂತಿಯಲ್ಲಿ ಎಳ್ಳುಂಡೆ ಮಾಡಲಾಗುತ್ತದೆ. ನೀವೂ ಮನೆಯಲ್ಲೇ ಸುಲಭವಾಗಿ ಎಳ್ಳುಂಡೆ ಮಾಡಿ ಸವಿಯಿರಿ.
ಎಳ್ಳುಂಡೆ ಮಾಡಲು ಬೇಕಾಗುವ ಪದಾರ್ಥ :
ಎಳ್ಳು ಬಿಳಿ) – 500 ಗ್ರಾಂ (3 ಕಪ್)
ತುಪ್ಪ – ಎರಡು ಚಮಚ
ಗೋಡಂಬಿ – 100 ಗ್ರಾಂ
ಹಸಿರು ಏಲಕ್ಕಿ – 4
ಬೆಲ್ಲ – 200 ಗ್ರಾಂ
ಎಳ್ಳುಂಡೆ ಮಾಡುವ ವಿಧಾನ : ಮೊದಲು ಒಂದು ಪಾತ್ರೆಗೆ ಎಳ್ಳುಗಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತ್ರ ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಿ. ನಂತ್ರ ಅದೇ ಪಾತ್ರೆಗೆ ತುಪ್ಪ ಹಾಕಿ, ಬೆಲ್ಲವನ್ನು ಹಾಕಿ ಬೆಲ್ಲ ಪಾಕ ಬರುವವರೆಗೆ ಕುದಿಸಿ. ನಂತ್ರ ಹುರಿದ ಎಳ್ಳು, ಏಲಕ್ಕಿ ಪುಡಿ ಹಾಗೂ ಗೊಡಂಬಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಆರಿಸಿ. ಮಿಶ್ರಣ ತಣ್ಣಗಾಗುವ ಮೊದಲೇ ಸಣ್ಣ ಸಣ್ಣ ಉಂಡೆ ಕಟ್ಟಿ.
You Might Also Like
TAGGED:ಮಕರ ಸಂಕ್ರಾಂತಿ