ಮಂಗಳೂರಿನಲ್ಲಿ ನೀರಿಗೆ ಹಾಹಾಕಾರ : ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತ, ಅರ್ಧ ದಿನ ತರಗತಿ

ಮಂಗಳೂರು : ಮಳೆ (Rain) ಬಾರದ ಹಿನ್ನೆಲೆ ಮಂಗಳೂರಿನಲ್ಲಿ ನದಿಗಳು ಬತ್ತಿ ಹೋಗಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ.

ಮಂಗಳೂರಿನ ನಂದಿನಿ ನದಿ (the river) ಹಾಗೂ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸುವ ನದಿಗಳು ಇದೀಗ ಸಂಪೂರ್ಣ ಬತ್ತಿ ಹೋಗಿದ್ದು, 40 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಿನ ಸಮಸ್ಯೆ ತಲೆದೋರಿದೆ.

ನೀರಿಲ್ಲದ ಪರಿಣಾಮ ಶಾಲೆಗಳಲ್ಲಿ ಬಿಸಿಯೂಟ (mid day meals) ಕೂಡ ಸ್ಥಗಿತಗೊಂಡಿದ್ದು, ಅರ್ಧದಿನ ಶಾಲಾ, ಕಾಲೇಜು ನಡೆಸಿ ಮಧ್ಯಾಹ್ನದ ಮೇಲೆ ಮಕ್ಕಳಿಗೆ ರಜೆ ಕೊಡಲಾಗುತ್ತಿದೆ. ಅಷ್ಟರ ಮಟ್ಟಿಗೆ ಕಡಲನಗರಿ ಮಂಗಳೂರಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ.

ಇನ್ನೂ, ಮಂಗಳೂರಿನಲ್ಲಿ ಇಂದು ಬೆಳಗ್ಗೆ ತುಂತುರು ಮಳೆಯಾಗಿದ್ದು, ಬಿಸಿಲಿನ ಧಗೆಯಲ್ಲಿದ್ದ ಜನರಿಗೆ ಮಳೆ ಕೂಲ್ ಕೂಲ್ ವಾತಾವರಣ ನೀಡಿದೆ. ಬಂಟ್ವಾಳ, ಉಳ್ಳಾಲ, ಬೆಳ್ತಂಗಡಿ ಸೇರಿದಂತೆ ಹಲವು ಕಡೆ ಸಾಧಾರಣ ಮಳೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read