ಮಂಗಳಸೂತ್ರ ಧರಿಸುವ ಮೊದಲು ಈ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ

ಸೌಭಾಗ್ಯದ ಸಂಕೇತ ಮಂಗಳಸೂತ್ರ ವಿವಾಹಿತ ಮಹಿಳೆಯರು ಮಂಗಳಸೂತ್ರ ಧರಿಸಬೇಕು ಎನ್ನಲಾಗುತ್ತದೆ. ಮಂಗಳಸೂತ್ರಕ್ಕೆ ಮಹತ್ವದ ಸ್ಥಾನವಿದೆ. ಮಂಗಳಸೂತ್ರವನ್ನು ಧರಿಸುವ ವೇಳೆ ಮಹಿಳೆಯರು ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಲ್ಲವಾದ್ರೆ ಪತಿ ಸಾವಿಗೆ ಇದು ಕಾರಣವಾಗುತ್ತದೆ ಎಂಬ ನಂಬಿಕೆಯಿದೆ.

ಮಂಗಳಸೂತ್ರದಲ್ಲಿ ಕರಿಮಣಿ ಹಾಕಲಾಗುತ್ತದೆ. ಕೆಟ್ಟ ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೆ ಕರಿಮಣಿ ಹಾಕಲಾಗುತ್ತದೆ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಹಾಗಾಗಿ ಮಂಗಳ ಸೂತ್ರದಲ್ಲಿ ಕರಿಮಣಿ ಇರುವಂತೆ ನೋಡಿಕೊಳ್ಳಿ.

ವಿವಾಹಿತ ಮಹಿಳೆ ಎಂದೂ ಬೇರೆ ಮಹಿಳೆಯ ಮಂಗಳಸೂತ್ರವನ್ನು ಕೇಳಿ ಧರಿಸಬಾರದು. ಹಾಗೆ ತನ್ನ ಮಂಗಳಸೂತ್ರವನ್ನು ಬೇರೆಯವರಿಗೆ ನೀಡಬಾರದು. ಹೀಗೆ ಮಾಡಿದಲ್ಲಿ ಗಂಡನ ಆಯಸ್ಸು ಕಡಿಮೆಯಾಗುತ್ತೆ ಎನ್ನಲಾಗಿದೆ.

ಮಂಗಳಸೂತ್ರದಲ್ಲಿ ಚಿನ್ನ ಅವಶ್ಯಕವಾಗಿರಬೇಕು. ಜ್ಯೋತಿಷ್ಯದ ಪ್ರಕಾರ ಚಿನ್ನ ಗ್ರಹದೋಷವನ್ನು ಕಡಿಮೆ ಮಾಡುತ್ತದೆ. ವೈವಾಹಿಕ ಜೀವನದಲ್ಲಿ ಸುಖ-ಸಮೃದ್ಧಿಗೂ ಇದು ಕಾರಣವಾಗುತ್ತದೆ.

ಮದುವೆ ಸಂದರ್ಭದಲ್ಲಿ ಪತಿ ಹಾಕಿದ ಮಂಗಳ ಸೂತ್ರವನ್ನು ಮಹಿಳೆ ತೆಗೆಯಬಾರದು. ಆಕೆ ಮಂಗಳಸೂತ್ರ ತೆಗೆದ್ರೆ ಅದು ಪತಿಗೆ ಕೆಡುಕು ಎನ್ನಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read