ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ದಿನಗಳ ನಂತರ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಶುಭ ಕೋರಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಆಹ್ವಾನಿಸಿದ ಬಗ್ಗೆ, “ಭಾರತ್ ಜೋಡೋ ಯಾತ್ರೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಭಾರತ್ ಜೋಡೋ ಅಭಿಯಾನದ ಯಶಸ್ಸಿಗೆ ಶುಭಾಶಯಗಳು. ಭಾರತವು ಕೇವಲ ಭೌಗೋಳಿಕ ವಿಸ್ತಾರಕ್ಕಿಂತ ಹೆಚ್ಚಾಗಿರುತ್ತದೆ – ಇದು ಪ್ರೀತಿ, ಅಹಿಂಸೆ, ಸಹಾನುಭೂತಿ, ಸಹಕಾರ ಮತ್ತು ಸಾಮರಸ್ಯದಿಂದ ಒಂದುಗೂಡಿದೆ. ಈ ಯಾತ್ರೆಯು ನಮ್ಮ ದೇಶದ ಈ ಅಂತರ್ಗತ ಸಂಸ್ಕೃತಿಯನ್ನು ಸಂರಕ್ಷಿಸುವ ಗುರಿಯನ್ನು ಸಾಧಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಅಖಿಲೇಶ್ ಯಾದವ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ.
ನಾಳೆ ಯುಪಿಗೆ ಪ್ರವೇಶಿಸುವ ಭಾರತ್ ಜೋಡೋ ಯಾತ್ರೆ ಮೆರವಣಿಗೆಯಲ್ಲಿ ರಾಹುಲ್ ಗಾಂಧಿಯನ್ನು ಸೇರುವ ಯಾವುದೇ ಯೋಜನೆಯನ್ನು ಹೊಂದಿದ್ದಾರೆಯೇ ಎಂದು ಅಖಿಲೇಶ್ ಯಾದವ್ ಸ್ಪಷ್ಟಪಡಿಸಿಲ್ಲ. ಆದರೆ ಅವರು ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂಬುದು ಪತ್ರದಲ್ಲಿ ಮೇಲ್ನೋಟಕ್ಕೆ ಗೋಚರವಾಗಿದೆ.
ಕಳೆದ ವಾರ ಅಖಿಲೇಶ್ ಯಾದವ್ ಕಾಂಗ್ರೆಸ್ ಪಕ್ಷದ ನಾಯಕ ಆಹ್ವಾನವನ್ನು ನಿರಾಕರಿಸಿದ್ದರು ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಎಂದಿದ್ದರು.
https://twitter.com/yadavakhilesh/status/1609813181106622466?ref_src=twsrc%5Etfw%7Ctwcamp%5Etweetembed%7Ctwterm%5E1609813181106622466%7Ctwgr%5Eb4e4e55231c414f82af26503d43df19431543881%7Ctwcon%5Es1_&ref_url=https%3A%2F%2Fwww.ndtv.com%2Findia-news%2Fbest-wishes-akhilesh-yadav-mayawati-respond-to-congress-yatra-invite-3657299