ಭಾರತೀಯ ಪರಂಪರೆಯಲ್ಲಿ ಮಹಾ ಶಿವರಾತ್ರಿ ಆಚರಣೆ ಹಿನ್ನಲೆ ಏನು…..? ಇಲ್ಲಿದೆ ಮಹತ್ವದ ಮಾಹಿತಿ

ಫೆ. 18 ರಂದು ಮಹಾಶಿವರಾತ್ರಿ. ಭಾರತೀಯ ಪರಂಪರೆಯಲ್ಲಿ ಶಿವರಾತ್ರಿಯ ಆಚರಣೆ ಸಾಕಷ್ಟು ಮಹತ್ವ ಪಡೆದಿದೆ. ಅಹೋರಾತ್ರಿ ನಿದ್ದೆಯನ್ನೂ ಮಾಡದೇ ಈಶ್ವರನ ಧ್ಯಾನದ ಮೂಲಕ ಆತ್ಮ ಪರಿಶುದ್ದಿಯ ಒಂದು ಭಾಗವೂ ಇದಾಗಿದ್ದು, ಈ ಜಗದಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಭಾವವನ್ನು ಮನದಲ್ಲಿ ತುಂಬಿಕೊಳ್ಳುವ ಮೂಲಕ ಅಹಂ ಪ್ರವೃತ್ತಿಯಿಂದ ದೂರ ಸರಿಯುವ ಸುಸಂದರ್ಭವೂ ಹೌದು.

ಮಹಾ ಶಿವರಾತ್ರಿ ಎಂಬುದು ಹಿಂದೂ ಸಂಪ್ರದಾಯದ ಪ್ರಕಾರ ಅತ್ಯಂತ ಪವಿತ್ರವಾದ ಆಚರಣೆಯಾಗಿದ್ದು, ಶಿವನನ್ನು ಆರಾಧಿಸಿ ಆ ಮೂಲಕ ಭಗವಂತನ ಅನುಗ್ರಹವನ್ನು ಪಡೆಯುವ ಆಚರಣೆಯಾಗಿದೆ. ಹೆಸರೇ ಹೇಳುವಂತೆ ರಾತ್ರಿ ಯಾಮದ ಪೂಜೆಯ ಮೂಲಕ ಶಿವನನ್ನು ಏಕಾಗ್ರತೆಯಿಂದ ಭಜಿಸಿ, ಪೂಜಿಸಿ, ಆರಾಧಿಸಿ ಮನಸ್ಸಿನ ಎಲ್ಲ ಕೊಳೆಯನ್ನು ನಿವಾರಿಸಿಕೊಳ್ಳುವ ಪವಿತ್ರ ದಿನವೂ ಹೌದು.

ಶಿವರಾತ್ರಿಯ ಆರಾಧನೆಯ ಹಿಂದೆ ಒಂದು ಅದ್ಭುತವಾದ ಕಥೆಯಿದೆ. ದೇವಾಸುರರು ಅಮೃತ ಪಡೆಯುವ ಸಲುವಾಗಿ ಕ್ಷೀರಸಾಗರ ಮಥನಕ್ಕೆ ಮುಂದಾಗುತ್ತಾರೆ. ಈ ಸಮಯದಲ್ಲಿ ಮಂದರಪರ್ವತವನ್ನೇ ಕಡಗೋಲಾಗಿ ಮಾಡಿಕೊಂಡು ವಾಸುಕಿಯನ್ನು ಹಗ್ಗದಂತೆ ಬಳಸಿ ಮಥನ ಕಾರ್ಯ ರಭಸವಾಗಿ ನಡೆಯುತ್ತಿರುವಾಗ ವಾಸುಕಿಯ ಬಾಯಿಂದ ವಿಷ ಜ್ವಾಲೆ ಹೊರಬಂದು ಕ್ಷೀರ ಸಾಗರವನ್ನು ವ್ಯಾಪಿಸಿತು.

ಆಗ ಮಥನ ಕಾರ್ಯದಲ್ಲಿ ತೊಡಗಿದ್ದ ಎಲ್ಲರೂ ಈ ಬಾಧೆಗೆ ಹೆದರಿ ಓಡಿ ಹೋದಾಗ ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನಂತೆ. ತಕ್ಷಣ ಪಾರ್ವತಿ, ಶಿವನ ಕಂಠ ಒತ್ತಿ ಹಿಡಿಯಲು ವಿಷವು ಅಲ್ಲಿಯೇ ನಿಂತಿತು. ಹಾಗಾಗಿ ಅಲ್ಲಿಂದ ಶಿವನು ವಿಷಕಂಠ ಅಥವಾ ನೀಲಕಂಠ ಎಂದೆನಿಸಿದನು. ಆ ದಿನವೇ ಮಾಘ ಕೃಷ್ಣ ಚತುರ್ದಶಿ. ಹಾಗಾಗಿ ಅಂದಿನಿಂದ ಪ್ರತಿ ವರ್ಷ ಅದೇ ದಿನ ಶಿವರಾತ್ರಿಯ ಆಚರಣೆ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read