ಭಾರತದಲ್ಲೇ ಅತ್ಯಂತ ಸುರಕ್ಷಿತವಾದ ಟಾಪ್ 5 ಕಾರುಗಳಿವು

ಕಾರು ಖರೀದಿಸಬೇಕು ಅನ್ನೋದು ಎಲ್ಲರ ಆಸೆ. ಹೊಸ ಕಾರು ಕೊಂಡುಕೊಳ್ಳುವಾಗ ಅದು ಎಷ್ಟು ಸುರಕ್ಷಿತ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಭಾರತದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ 5 ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

ಟಾಟಾ ಆಲ್ಟ್ರೋಜ್: ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಸುರಕ್ಷಿತ ಹ್ಯಾಚ್‌ಬ್ಯಾಕ್ ಕಾರು ಇದು. GNCAP ನಿಂದ 5-ಸ್ಟಾರ್ ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ. ಎರಡು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು, ಮುಂಭಾಗದ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎತ್ತರ ಹೊಂದಾಣಿಕೆಯ ಮುಂಭಾಗದ ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಈ ಕಾರಿನಲ್ಲಿದೆ. ಮುಂಭಾಗ ಮತ್ತು ಹಿಂಭಾಗದ ಫಾಗ್ ಲ್ಯಾಂಪ್‌ಗಳನ್ನೂ ಅಳವಡಿಸಲಾಗಿದೆ. ಈ ಕಾರಿನ ಬೆಲೆ 6.60 ಲಕ್ಷದಿಂದ ಪ್ರಾರಂಭವಾಗಿ 10.35 ಲಕ್ಷ ರೂಪಾಯಿವರೆಗಿದೆ.

ಮಹಿಂದ್ರಾ XUV300 : ಮಹೀಂದ್ರಾದ ಈ ಸಬ್-4 ಮೀಟರ್ ಎಸ್‌ಯುವಿ 5-ಸ್ಟಾರ್ ರೇಟಿಂಗ್ ಪಡೆದಿದೆ. XUV300 ನಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಳಿವೆ. ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗ ಮತ್ತು ಮುಂಭಾಗದ ಪಾರ್ಕಿಂಗ್ ಸಂವೇದಕಗಳು,  ESC, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಈ ಕಾರು ಒಳಗೊಂಡಿದೆ. ಬೆಲೆ 8.42 ಲಕ್ಷದಿಂದ ಪ್ರಾರಂಭ.

ಮಹಿಂದ್ರಾ XUV 700: ಈ SUV ವಯಸ್ಕರ ರಕ್ಷಣೆಗಾಗಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. SUVಯ ಬಾಡಿ ಶೆಲ್ ಮತ್ತು ಫುಟ್‌ವೆಲ್ ಪ್ರದೇಶವು ಸ್ಥಿರವಾಗಿದೆ, ಮುಂದೆ ಲೋಡ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 7 ಏರ್‌ಬ್ಯಾಗ್‌ಗಳು, ADAS, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ವಯಂಚಾಲಿತ ತುರ್ತು ಬ್ರೇಕ್ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿ ಲಭ್ಯವಿದೆ. ಬೆಲೆ 14.01 ಲಕ್ಷದಿಂದ ಪ್ರಾರಂಭವಾಗಿ 26.18 ಲಕ್ಷ ರೂಪಾಯಿವರೆಗಿದೆ.

ಟಾಟಾ ನೆಕ್ಸಾನ್: ಈ SUV ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಡ್ಯುಯಲ್ ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), ಎಬಿಎಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ರೇರ್‌ ಪಾರ್ಕಿಂಗ್ ಸೆನ್ಸರ್‌ಗಳು, ISOFIX ಚೈಲ್ಡ್ ಸೀಟ್, ಆಟೋ ಹೆಡ್‌ಲ್ಯಾಂಪ್‌ ಮತ್ತು ವೈಪರ್‌ಗಳು ಈ ಕಾರಿನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳಾಗಿವೆ. ಬೆಲೆ 7.80 ಲಕ್ಷದಿಂದ 14.50 ಲಕ್ಷ ರೂಪಾಯಿವರೆಗಿದೆ.

ಟಾಟಾ ಪಂಚ್:‌ ಇದು ಟಾಟಾದ ಮಿನಿ ಎಸ್‌ಯುವಿ. ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್ ಟಾಟಾ ಪಂಚ್‌ಗೆ ಸಿಕ್ಕಿದೆ. ಈ ಕಾರು ಡ್ಯುಯಲ್ ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), ಎಬಿಎಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ISOFIX ಚೈಲ್ಡ್ ಸೀಟ್, ಆಟೋ ಹೆಡ್‌ಲ್ಯಾಂಪ್‌ ಮತ್ತು ವೈಪರ್‌ಗಳನ್ನು ಹೊಂದಿದೆ. ಸ್ಕಿಡ್ ಆಗುವುದನ್ನು ತಡೆಯಲು ಕಡಿಮೆ-ಟ್ರಾಕ್ಷನ್ ಮೋಡ್ ಅನ್ನು ಸಹ ಅಳವಡಿಸಲಾಗಿದೆ. ಬೆಲೆ 6 ಲಕ್ಷದಿಂದ ಪ್ರಾರಂಭ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read