ಬ್ರೈನ್ ಟ್ಯೂಮರ್‌ಗೆ ಕಾರಣವಾಗುವ ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

ಇತ್ತೀಚಿನ ದಿನಗಳಲ್ಲಿ ಮಧುಮೇಹ, ಕ್ಯಾನ್ಸರ್‌ ಮಾತ್ರವಲ್ಲ ಬ್ರೈನ್ ಟ್ಯೂಮರ್ ಕೂಡ ಬಹಳಷ್ಟು ಜನರನ್ನು ಕಾಡುತ್ತಿರುವ ಅಪಾಯಕಾರಿ ಕಾಯಿಲೆಯಾಗಿದೆ. ದೇಹದಲ್ಲಿ ಅಸಹಜವಾಗಿ ಬೆಳೆಯುತ್ತಿರುವ ಅಂಗಾಂಶದಿಂದಾಗಿ ಮೆದುಳಿನ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಟ್ಯೂಮರ್‌ ಉಂಟಾಗುತ್ತದೆ. ಈ ಗಡ್ಡೆಯಲ್ಲಿ ಜೀವಕೋಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತವೆ ಮತ್ತು ಇದು ಮೆದುಳಿನ ಕೆಲಸವನ್ನು ತಡೆಯುತ್ತದೆ.ಬ್ರೈನ್‌ ಟ್ಯೂಮರ್‌ಗೆ ಅನೇಕ ಕಾರಣಗಳಿರಬಹುದು. ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವ ಅಪಾಯಕಾರಿ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ. ಈ ಬಗ್ಗೆ ಗಮನಹರಿಸದೇ ಇದ್ದರೆ ಬಹುದೊಡ್ಡ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಬ್ರೈನ್‌ ಟ್ಯೂಮರ್‌ಗೆ ಕಾರಣವಾಗುವ ಅಪಾಯಕಾರಿ ಅಂಶಗಳು

ವಯಸ್ಸು: ಮೆದುಳಿನ ಗೆಡ್ಡೆ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಆದರೆ ಬ್ರೈನ್‌ ಟ್ಯೂಮರ್‌ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಜೆನೆಟಿಕ್ಸ್: ಕೆಲವರು ಆನುವಂಶಿಕವಾಗಿ ಬ್ರೈನ್‌ ಟ್ಯೂಮರ್‌ಗೆ ತುತ್ತಾಗಬಹುದು. ಉದಾಹರಣೆಗೆ ನ್ಯೂರೋಫೈಬ್ರೊಮಾಟೋಸಿಸ್ ಟೈಪ್ 1 ಅಥವಾ 2, ಲಿ-ಫ್ರೌಮೆನಿ ಸಿಂಡ್ರೋಮ್ ಅಥವಾ ಟರ್ಕೋಟ್ ಸಿಂಡ್ರೋಮ್‌ನಂತಹ ಕೆಲವು ಆನುವಂಶಿಕ ಪರಿಸ್ಥಿತಿಗಳು ಮೆದುಳಿನ ಗಡ್ಡೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತವೆ.

ಮೊಬೈಲ್ ಫೋನ್: ಮೊಬೈಲ್ ಫೋನ್ ಅನ್ನು ಅತಿಯಾಗಿ ಬಳಸುವುದರಿಂದ ಬ್ರೈನ್ ಟ್ಯೂಮರ್ ಉಂಟಾಗುತ್ತದೆ. ಮೊಬೈಲ್ ಫೋನ್‌ಗಳ ಅತಿಯಾದ ಮತ್ತು ದೀರ್ಘಾವಧಿಯ ಬಳಕೆಯು ಬ್ರೈನ್ ಟ್ಯೂಮರ್ ಸಾಧ್ಯತೆಯನ್ನು ಹೆಚ್ಚಿಸಬಹುದು. ಫೋನ್‌ನಿಂದ ಉತ್ಪತ್ತಿಯಾಗುವ ಶಾಖ ಮತ್ತು ಅದರ ವಿಕಿರಣ ಎರಡಕ್ಕೂ ಇದು ಲಿಂಕ್ ಆಗಿರುತ್ತದೆ.

ಪರಿಸರದ ವಿಷಗಳು: ಕೀಟನಾಶಕಗಳು ಅಥವಾ ದ್ರಾವಕಗಳಂತಹ ಕೆಲವು ರಾಸಾಯನಿಕಗಳು ಅಥವಾ ವಿಷಗಳಿಗೆ ಒಡ್ಡಿಕೊಳ್ಳುವುದರಿಂದ ಬ್ರೈನ್‌ ಟ್ಯೂಮರ್‌ಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಕಳಪೆ ಜೀವನಶೈಲಿ: ಸಂಸ್ಕರಿತ ಆಹಾರದ ಹೆಚ್ಚಿನ ಸೇವನೆ ಅಥವಾ ಹಣ್ಣುಗಳು ಮತ್ತು ತರಕಾರಿಗಳ ಕಡಿಮೆ ಸೇವನೆ, ದೈಹಿಕ ಚಟುವಟಿಕೆಯ ಕೊರತೆಯಂತಹ ಕೆಲವು ಜೀವನಶೈಲಿ ಅಂಶಗಳು ಮೆದುಳಿನ ಗಡ್ಡೆಗಳ ಬೆಳವಣಿಗೆಗೆ ಕಾರಣವಾಗಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read