ಬ್ಯಾಂಕ್‌ನಲ್ಲಿ 2,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ….? ಇಲ್ಲಿದೆ ಹಂತ-ಹಂತದ ಮಾರ್ಗದರ್ಶಿ…..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಿಸಿದೆ. ಆದರೆ ಅವುಗಳು ಕಾನೂನುಬದ್ಧ ಟೆಂಡರ್ ಆಗಿಯೇ ಉಳಿಯುತ್ತವೆ ಎಂದು ಹೇಳಿದೆ. ಇದಲ್ಲದೆ, ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಆದಾಗ್ಯೂ ನಾಗರಿಕರು ತಮ್ಮ ಬಳಿ ಇರುವ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಖಾತೆಗಳಿಗೆ ಠೇವಣಿ ಮಾಡಬಹುದು. ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಸೆಪ್ಟೆಂಬರ್ 30ರೊಳಗೆ ಇತರ ಮುಖಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ನೋಟು ಅಮಾನ್ಯೀಕರಣದ ನಂತರ 2016ರಲ್ಲಿ 2000 ರೂಪಾಯಿ ನೋಟುಗಳನ್ನು ಪರಿಚಯಿಸಲಾಗಿತ್ತು. ಜನರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು.

ಬ್ಯಾಂಕ್‌ನಲ್ಲಿ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ?

2000 ರೂಪಾಯಿ ಮುಖಬೆಲೆ ನೋಟುಗಳನ್ನು ಠೇವಣಿ ಅಥವಾ ವಿನಿಮಯ ಮಾಡಲು ಮೇ 23 ರಿಂದ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ನೀವು ಆ ಶಾಖೆ ಅಥವಾ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಖಾತೆಯ ವಿವರಗಳನ್ನು ಒದಗಿಸಿ. ನಂತರ 2000 ರೂಪಾಯಿ ನೋಟುಗಳ ವಿನಿಮಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಅಪ್ಲಿಕೇಶನ್‌ ಅನ್ನು ಭರ್ತಿ ಮಾಡಿ. ಅದರಲ್ಲಿ ಅಗತ್ಯವಿರುವ ಗುರುತಿನ ವಿವರಗಳನ್ನು ಸಲ್ಲಿಸಿದ ಬಳಿಕ ವಿನಿಮಯಕ್ಕಾಗಿ ಇರುವ 2000 ರೂಪಾಯಿ ನೋಟಿನ ವಿವರಗಳನ್ನು ಭರ್ತಿ ಮಾಡಿ. ಬಳಿಕ ಹತ್ತಿರದ ಬ್ಯಾಂಕ್‌ನಿಂದ ಹಣ ವಿನಿಮಯ ಮಾಡಿಕೊಳ್ಳಲು 2000 ರೂಪಾಯಿ ನೋಟುಗಳ ಜೊತೆಗೆ ಅಪ್ಲಿಕೇಶನ್‌ ಅನ್ನು ಸಲ್ಲಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read