ಈ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

ಈ ಒಂದು ಹಣ್ಣಿನ ಸೇವನೆಯಿಂದ ಹತ್ತಾರು ಕಾಯಿಲೆಗಳಿಂದ ದೂರವಿರಬಹುದು. ಬುತ್ತಲೇ ಹಣ್ಣು ಅಥವಾ ಬುಗುರಿ ಎಂಬ ಹೆಸರಿರುವ ಜಾನಿ ಮರ, ಈ ಹಣ್ಣು ಅಕ್ಟೋಬರ್ ತಿಂಗಳಿನಲ್ಲಿ ಹೇರಳವಾಗಿ ಸಿಗುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಹಾಗೂ ಕಬ್ಬಿಣದ ಅಂಶವಿರುತ್ತದೆ. ರಕ್ತದ ವೃದ್ಧಿಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.

ರಕ್ತದ ಒತ್ತಡ ಸಮಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ನರಮಂಡಲಕ್ಕೆ ಶಕ್ತಿ ತುಂಬುತ್ತದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬೇಕು. ಇದರ ಸೇವನೆಯಿಂದ ಮಂಡಿ ನೋವು, ಕೀಲು ನೋವು ಕಡಿಮೆ ಆಗುತ್ತದೆ. ಉಷ್ಣ ಸಂಬಂದಿ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ಮರೆಯದೆ ತಿನ್ನಿ. ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ.

ಈ ಹಣ್ಣಿನ ರಸವನ್ನು ಗಾಯಗಳಿಗೆ ಹಚ್ಚುತ್ತಾರೆ, ಚರ್ಮದ ಮೇಲೆ ತೀವ್ರ ತುರಿಕೆ ಅಥವಾ ಉರಿ ಕಾಣಿಸಿದರೆ ಈ ಹಣ್ಣಿನ ರಸವನ್ನು ಹಚ್ಚುತ್ತಾರೆ. ವಾತ ಪಿತ್ತ, ಕಫ, ದೋಷಗಳನ್ನು ನಿವಾರಣೆ ಮಾಡುವ ಈ ಹಣ್ಣನ್ನು ವರ್ಷಕ್ಕೆ ಒಂದು ಬಾರಿ ಸೇವಿಸಿದರೂ ಸಾಕು, ನೀವು ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read