ಬೊಜ್ಜಿನ ಸಮಸ್ಯೆ ಇದ್ದರೆ ಮಲಗುವ ಮುನ್ನ ಮಾಡಿ ಈ ಕೆಲಸ, ಫಟಾಫಟ್‌ ಇಳಿಯುತ್ತೆ ತೂಕ…..!

ಜೀವನಶೈಲಿಯ ಬದಲಾವಣೆಯಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಹೆಚ್ಚಾದಾಗ ಆತಂಕಕ್ಕೀಡಾಗುವ ಬದಲು ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಬಹಳ ಸುಲಭವಾಗಿ ಬೊಜ್ಜನ್ನು ಇಳಿಸಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ ಮೊದಲು ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಬೇಕು. ಇದರಿಂದಾಗಿ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಜಿಮ್‌ಗೆ ಹೋಗದೆ ತೂಕ ಕಡಿಮೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

ರಾತ್ರಿ ಚೆನ್ನಾಗಿ ನಿದ್ರಿಸಿ

ರಾತ್ರಿ ಒಂದು ಗಂಟೆ ಹೆಚ್ಚು ನಿದ್ರೆ ಮಾಡಿದರೆ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳಿಗೆ ನಿದ್ರೆಯೇ ಸೂಕ್ತ ಚಿಕಿತ್ಸೆ. ಹೆಚ್ಚು ಹೆಚ್ಚು ನಿದ್ದೆ ಮಾಡುವುದರಿಂದ ತೂಕ ಇಳಿಸುವುದರ ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಹಾಗಾಗಿ ನೀವು ಕಡಿಮೆ ನಿದ್ದೆ ಮಾಡುವ ಅಭ್ಯಾಸ ಹೊಂದಿದ್ದರೆ ಕೂಡಲೇ ಅದನ್ನು ಬದಲಾಯಿಸಿ. ಪ್ರತಿದಿನ ಕನಿಷ್ಠ 9 ಗಂಟೆಗಳ ಕಾಲ ಮಲಗುವ ಅಭ್ಯಾಸ ಮಾಡಿಕೊಳ್ಳಿ.

ಮಲಗುವ ಮುನ್ನ ಪ್ರೋಟೀನ್ ಶೇಕ್ ಕುಡಿಯಿರಿ

ಮಲಗುವ ಮೊದಲು ಪ್ರೋಟೀನ್ ಶೇಕ್ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಅಥವಾ ಕೊಬ್ಬಿಗಿಂತ ಹೆಚ್ಚು ಥರ್ಮೋಜೆನಿಕ್ ಎಂದು ನಂಬಲಾಗಿದೆ. ಇದರಿಂದಾಗಿ ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಜೀರ್ಣಿಸಿಕೊಳ್ಳಲು ಕಾರಣವಾಗುತ್ತದೆ.

ಸ್ಲೀಪ್‌ ಮಾಸ್ಕ್‌ ಧರಿಸಿ

ಸ್ಲೀಪ್ ಮಾಸ್ಕ್ ಧರಿಸುವುದಕ್ಕೂ ತೂಕ ನಷ್ಟಕ್ಕೂ ಸಂಬಂಧವಿದೆ. ಮಂದ ಬೆಳಕಿನಲ್ಲಿ ಮಲಗುವವರು ಬೊಜ್ಜು ಹೊಂದುವ ಸಾಧ್ಯತೆ 21 ಪ್ರತಿಶತದಷ್ಟು ಹೆಚ್ಚು ಎಂದು ನಂಬಲಾಗಿದೆ. ಬೆಳಕಿನಲ್ಲಿ ಮಲಗುವ ಅಭ್ಯಾಸವಿರುವವರು ಸ್ಲೀಪ್‌ ಮಾಸ್ಕ್‌ ಧರಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read