ನವದೆಹಲಿಯಲ್ಲಿ ಹೊಸವರ್ಷದಂದು ನಡೆದ ಭೀಕರ ಹಿಟ್ & ರನ್ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಯುವಕರಿದ್ದ ಮೋಟಾರ್ ಸೈಕಲ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಸುಮಾರು ನಾಲ್ಕು ಕಿಲೋಮೀಟರ್ ದೂರಕ್ಕೆ ಎಳೆದೊಯ್ದಿದೆ. ಅದೃಷ್ಟವಶಾತ್ ಬೈಕ್ ಸವಾರರ ಪ್ರಾಣಕ್ಕೆ ಅಪಾಯವಾಗಿಲ್ಲ. ಹರಿಯಾಣದ ಗುರುಗ್ರಾಮದಲ್ಲಿ ನಡೆದಿರೋ ಭಯಾನಕ ಅಪಘಾತವಿದು. ಇಬ್ಬರು ವ್ಯಕ್ತಿಗಳು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಹಿಂದಿನಿಂದ ವೇಗವಾಗಿ ಬಂದ ಕಾರು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಆ ರಭಸಕ್ಕೆ ಬೈಕ್ ಕೆಳಗೆ ಬಿದ್ದಿದ್ದು, ವಾಹನದ ಮುಂಭಾಗದ ಗ್ರಿಲ್‌ಗೆ ಸಿಕ್ಕಿ ಹಾಕಿಕೊಂಡಿದೆ. ಕಾರು ಸುಮಾರು 4 ಕಿ.ಮೀ.ವರೆಗೆ ಎಳೆದೊಯ್ದಿದೆ. ಸೆಕ್ಟರ್ 65 ರಲ್ಲಿ ಹೋಂಡಾ ಸಿಟಿ ಕಾರು ಮೋಟಾರ್‌ಸೈಕಲ್ ಅನ್ನು ಎಳೆದೊಯ್ಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ. ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಕುಡಿದ ಅಮಲಿನಲ್ಲಿದ್ದು, ಬೈಕ್ ಕಾರಿಗೆ ಸಿಕ್ಕಿಹಾಕಿಕೊಂಡರೂ ನಿಲ್ಲಿಸಲೇ ಇಲ್ಲ. ಕೂಗಿ ಕರೆದರೂ ಕಿವಿಗೊಡದೆ ವೇಗವಾಗಿ ಕಾರು ಓಡಿಸಿದ್ದಾನೆ. ಈ ಫೋಟೋಗಳನ್ನೆಲ್ಲ ಸೆರೆಹಿಡಿದಿರೋ ಬೈಕ್ ಸವಾರರು ಪೊಲೀಸರಿಗೆ ದೂರಿನ ಜೊತೆಗೆ ಫೋಟೋಗಳನ್ನೂ ನೀಡಿದ್ದಾರೆ.
ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಫರಿದಾಬಾದ್ ನಿವಾಸಿ ಸುಶಾಂತ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಕಾರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹೊಸ ವರ್ಷದ ರಾತ್ರಿ ಇದೇ ರೀತಿಯ ಘಟನೆ ದೆಹಲಿಯಲ್ಲಿ ನಡೆದಿತ್ತು. 20 ವರ್ಷದ ಯುವತಿಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು ಕೆಲವು ಕಿಮೀಗಳವರೆಗೆ ಎಳೆದೊಯ್ದಿತ್ತು. ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದರು.
https://twitter.com/Ya_SM_I_N/status/1621150696254099457?ref_src=twsrc%5Etfw%7Ctwcamp%5Etweetembed%7Ctwterm%5E1621150696254099457%7Ctwgr%5E8259d86c6c7eaadd48177051883e5b2b0505645f%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fgurugram-road-rage-video-speeding-car-hits-motorcycle-drags-it-for-over-4-km-in-sector-62-video-goes-viral-watch-5881435%2F