ಬೇಸಿಗೆಯ ಬಿಸಿಲಿಗೆ ಹೊರಗೆ ಹೋಗಿ ಬಂದರೆ ತಲೆ ತಿರುಗಿದಂತೆ ಆಗುತ್ತದೆ. ಹೊರಗಡೆ ಸಿಗುವ ತಂಪು ಪಾನೀಯಗಳನ್ನು ತಂದು ಫ್ರಿಡ್ಜ್ ನಲ್ಲಿಟ್ಟುಕೊಂಡು ಕುಡಿಯುವ ಬದಲು ಮನೆಯಲ್ಲಿಯೇ ಬೆಲ್ಲದ ಪಾನಕ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ರುಚಿಕರವಾಗಿರುತ್ತದೆ.ಬೇಕಾಗುವ ಸಾಮಾಗ್ರಿಗಳು:1 ಲೀಟರ್ ನೀರು, 250 ಗ್ರಾಂ ಬೆಲ್ಲ, ಅರ್ಧ ಖರ್ಬೂಜ ಹಣ್ಣಿನ ಹೋಳುಗಳು, ಲಿಂಬೆಹಣ್ಣು-1, ಏಲ್ಕಕಿ-ಪುಡಿ ¼ ಟೀ ಸ್ಪೂನ್.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ಖರ್ಬೂಜ ಹಣ್ಣಿನ ಹೋಳುಗಳನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ . ನಂತರ ನೀರಿನಲ್ಲಿ ಕರಗಿಸಿಟ್ಟುಕೊಂಡ ಬೆಲ್ಲದ ನೀರನ್ನು ಈ ಖರ್ಬೂಜದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ, ಲಿಂಬೆ ಹಣ್ಣಿನ ರಸ ಹಿಂಡಿ. ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಪಾನಕ ರೆಡಿ.
