ಬೇಗ ಶ್ರೀಮಂತರಾಗಬೇಕಾ……? ಹೀಗೆ ಮಾಡಿ

ಕೆಲವೊಬ್ಬರು ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟುತ್ತಾರೆ. ಆದರೆ ಎಲ್ಲರೂ ಆ ಅದೃಷ್ಟ ಪಡೆದುಕೊಂಡು ಬಂದಿರೋದಿಲ್ಲ. ಇವತ್ತಿನ ಆರ್ಥಿಕ ಯುಗದಲ್ಲಿ ದುಡ್ಡಿನ ಬಲದ ಮೇಲೆಯೇ ಎಲ್ಲವೂ ನಿಂತಿದೆ. ಹಾಗಾಗಿ ಎಲ್ಲರೂ ದುಡ್ಡಿನ ಹಿಂದೆ ಬಿದ್ದು ಹಗಲು ರಾತ್ರಿ ಒಂದು ಮಾಡಿ ದುಡಿಯುತ್ತಾರೆ. ಹಾಗಿರುವಾಗ ಜ್ಯೋತಿಷ್ಯ ಶಾಸ್ತ್ರದ ಈ ಕ್ರಮಗಳನ್ನು ಅನುಸರಿಸಿದರೆ ಆರ್ಥಿಕ ಪರಿಸ್ಥಿತಿ ಉನ್ನತ ಮಟ್ಟಕ್ಕೆ ಏರಿ ಶ್ರೀಮಂತರಾಗಬಹುದು.

ಶ್ರೀ ಯಂತ್ರದ ಪೂಜೆ :  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರೀ ಯಂತ್ರದ ಪೂಜೆ ಮಾಡುವುದರಿಂದ ಆರ್ಥಿಕ ಕಷ್ಟಗಳು ದೂರವಾಗುತ್ತವೆ. ಈ ಪೂಜೆ ಮಾಡುವಾಗ ಕೆಂಪು ಬಣ್ಣದ ಬಟ್ಟೆಯನ್ನು ಕೆಳಗೆ ಹಾಕಿ ಅದರ ಮೇಲೆ ಶ್ರೀ ಯಂತ್ರವನ್ನಿಡಿ. ನಂತರ ಯಂತ್ರಕ್ಕೆ ನೀರು ಮತ್ತು ಹಾಲಿನ ಪ್ರೋಕ್ಷಣೆ ಮಾಡಿ ಪೂಜೆ ಮಾಡಿ. ಪೂಜೆ ಮುಗಿದ ನಂತರ ಶ್ರೀ ಯಂತ್ರವನ್ನು ಕಪಾಟಿನಲ್ಲಿಡಿ. ಇದರಿಂದ ಬಡತನ ದೂರವಾಗುತ್ತೆ. ಶ್ರೀ ಯಂತ್ರದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಶ್ರೀ ಮಂತ್ರದ ಜಪವನ್ನು ಮಾಡಿ.

ಶ್ರೀ ಯಂತ್ರದ ಮಹತ್ವ : ಶ್ರೀ ಯಂತ್ರವು ದಕ್ಷಿಣ ಭಾರತದ ತಿರುಪತಿಯಲ್ಲಿಯೂ ಇದೆ. ತಿರುಪತಿಯಲ್ಲಿ ಪ್ರತಿನಿತ್ಯವೂ ಶ್ರೀ ಯಂತ್ರದ ಪೂಜೆ ನಡೆಯುತ್ತದೆ. ಹೀಗೆ ಮಾಡುವುದರಿಂದ ಧನಲಾಭವಾಗುತ್ತದೆ.

ಶ್ರೀ ಯಂತ್ರದ ಮಂತ್ರ :  ಓಂ ಶ್ರೀಂ ಹ್ರೀಂ ಶ್ರೀಂ ನಮಃ, ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀ ಹ್ರೀಂ ಶ್ರೀ ಓಂ ಮಹಾಲಕ್ಷ್ಮಮ್ಯ ನಮಃ  ಮಂತ್ರವನ್ನು ಜಪಿಸಬೇಕು.

ಪೂಜೆ ಮಾಡುವಾಗ, ಭಗ್ನವಾಗದೇ ಸರಿಯಾಗಿರುವ ಶ್ರೀ ಯಂತ್ರವನ್ನು ಮಾತ್ರ ಪೂಜೆ ಮಾಡಿ. ಇಲ್ಲವಾದರೆ ನಿಮ್ಮ ಪೂಜೆಗೆ ಫಲ ಸಿಗುವುದಿಲ್ಲ.

ಒಮ್ಮೆ ಶ್ರೀ ಯಂತ್ರವನ್ನು ಸ್ಥಾಪಿಸಿದ ನಂತರ ಪ್ರತಿನಿತ್ಯವೂ ಅದರೆದುರು ಮಂತ್ರವನ್ನು ಜಪಿಸಬೇಕು. ಶ್ರೀ ಯಂತ್ರವನ್ನು ಸ್ಥಾಪಿಸಿದ ಮೇಲೆ ಮನೆಯಲ್ಲಿ ಮದ್ಯ, ಮಾಂಸ ಸೇವನೆ ಮಾಡಬಾರದು. ಶ್ರೀ ಯಂತ್ರವನ್ನು ಒಳ್ಳೆಯ ಮುಹೂರ್ತದಲ್ಲೇ ಸ್ಥಾಪಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read