ತಲೆಯಲ್ಲಿ ಅತಿಯಾಗಿ ಬೆವರುವುದು ಕೂದಲುದುರುವ ಸಮಸ್ಯೆಗೆ ಕಾರಣವಾಗಬಹುದು….! ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಬೆವರುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಬೆವರಿನಿಂದ ಮಾತ್ರ ಕೂದಲಿನ ಸಮಸ್ಯೆ ಕಾಡುತ್ತದೆ. ಅತಿಯಾದ ಬೆವರಿನಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

*ನೀವು ತಲೆಯಲ್ಲಿ ಅತಿಯಾಗಿ ಬೆವರುವುದು ಕಂಡು‌ ಬಂದಾಗ ತಕ್ಷಣ ಸ್ನಾನ ಮಾಡಿ. ಇದರಿಂದ ಕೂದಲಿನಲ್ಲಿರುವ ಕೊಳೆ ನಿವಾರಣೆಯಾಗಿ ಕೂದಲುದುರುವುದು ಕಡಿಮೆಯಾಗುತ್ತದೆ.

*ಹೆಚ್ಚು ಹಬೆಯನ್ನು ತೆಗೆದುಕೊಳ್ಳಲು ಹೋಗಬೇಡಿ. ಇದರಿಂದ ತಲೆಯಲ್ಲಿ ಬೆವರುವುದು ಹೆಚ್ಚಾಗಿ ಕೂದಲಿಗೆ ಹಾನಿಯಾಗಬಹುದು.

*ತಲೆಗೆ ಟೋಪಿಯನ್ನು ಧರಿಸುವುದು ಕಡಿಮೆ ಮಾಡಿ. ಇದರಿಂದ ವಾತಾವರಣದ ಬಿಸಿಗೆ ತಲೆಯಲ್ಲಿ ಬೆವರು ಬರುತ್ತದೆ. ಮತ್ತು ಕೂದಲಿಗೆ ಗಾಳಿ ಹರಿವು ಕಡಿಮೆಯಾಗುತ್ತದೆ.

*ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಡಿ. ಇದರಿಂದ ಕೂಡ ಬೆವರು ಆವಿಯಾಗದೆ ಕೂದಲಿನಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಧೂಳು, ಕೊಳಕು ಕೂದಲಿನಲ್ಲಿ ಸ್ಟೋರ್ ಆಗಿ ಕೂದಲು ಉದುರುತ್ತದೆ.

*ಹಾಗೇ ಸೂರ್ಯನ ಬಿಸಿಲಿಗೆ ಹೆಚ್ಚು ಕೂದಲನ್ನು ಒಡ್ಡಿಕೊಳ್ಳಬೇಡಿ. ಇದರಿಂದ ನೆತ್ತಿಯಲ್ಲಿ ಬೆವರು ಹೆಚ್ಚಾಗುತ್ತದೆ. ಮತ್ತು ಕೂದಲಿಗೆ ಹಾನಿಯಾಗುತ್ತದೆ. ಹಾಗಾಗಿ ಸೂರ್ಯ ಬಿಸಿಲನ್ನು ತಪ್ಪಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read