ಬೆಳ್ಳುಳ್ಳಿ ಸಿಪ್ಪೆ ಎಸೆಯುತ್ತೀರಾ….? ಅದರಲ್ಲಿವೆ ಇಂಥಾ ಚಮತ್ಕಾರಿ ಗುಣಗಳು….!

ಬೆಳ್ಳುಳ್ಳಿ ನಾವು ಪ್ರತಿನಿತ್ಯ ಬಳಸುವ ಪ್ರಮುಖ ಆಹಾರಗಳಲ್ಲೊಂದು. ಬೆಳ್ಳುಳ್ಳಿ ಇಲ್ಲದಿದ್ದರೆ ಅನೇಕ ಭಕ್ಷ್ಯಗಳು ರುಚಿ ಕಳೆದುಕೊಳ್ಳುತ್ತವೆ. ಸಾಮಾನ್ಯವಾಗಿ ನಾವೆಲ್ಲರೂ ಬೆಳ್ಳುಳ್ಳಿ ಸುಲಿದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಬೆಳ್ಳುಳ್ಳಿ ಎಸಳುಗಳನ್ನು ಮಾತ್ರ ಬಳಸುತ್ತೇವೆ. ಆದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿ ಹಲವಾರು ಚಮತ್ಕಾರಿ ಗುಣಗಳಿದ್ದು, ಬಹುತೇಕರಿಗೆ ಇದರ ಬಗ್ಗೆ ತಿಳಿದಿಲ್ಲ. ಇದು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಬೆಳ್ಳುಳ್ಳಿಯ ಸಿಪ್ಪೆಗಳು ಎಂಟಿ ವೈರಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ತುಂಬಿವೆ. ಈ ಸಿಪ್ಪೆಗಳನ್ನು ತರಕಾರಿಗಳು ಮತ್ತು ಸೂಪ್‌ಗಳಲ್ಲಿ ಬೆರೆಸಿ ಬೇಯಿಸಬಹುದು, ಇದು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಸಿಪ್ಪೆಗಳು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಅವು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ.

ತುರಿಕೆ ಸಮಸ್ಯೆಯನ್ನು ಸಹ ಬೆಳ್ಳುಳ್ಳಿ ಸಿಪ್ಪೆ ಹೋಗಲಾಡಿಸಬಲ್ಲದು. ತುರಿಕೆ ಇರುವ ಜಾಗದಲ್ಲಿ ಬೆಳ್ಳುಳ್ಳಿ ಸಿಪ್ಪೆಯನ್ನು ಅನ್ವಯಿಸಬೇಕು. ಇದು ಮೊಡವೆಗಳಿಗೂ ಪರಿಣಾಮಕಾರಿ ಮದ್ದು. ಮೊಡವೆ ಸಮಸ್ಯೆ ಇರುವವರು ಇದನ್ನು ಬಳಸಬಹುದು. ಬೆಳ್ಳುಳ್ಳಿ ಸಿಪ್ಪೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ತಲೆಯಲ್ಲಿ ಹೊಟ್ಟಿನ ಸಮಸ್ಯೆಯಿದ್ದರೆ ಬೆಳ್ಳುಳ್ಳಿ ಸಿಪ್ಪೆಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಬೇಕು. ಇದರಿಂದ ತಲೆಹೊಟ್ಟು ಮತ್ತು ಹೇನು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ ಸಿಪ್ಪೆಯನ್ನು ನೀರಲ್ಲಿ ಕುದಿಸಿ ಆ ನೀರನ್ನು ಕೂಡ ಕೂದಲಿಗೆ ಹಚ್ಚಿಕೊಳ್ಳಬಹುದು. ನಿಮಗೆ ಅಸ್ತಮಾ ಸಮಸ್ಯೆ ಇದ್ದರೆ ಅದಕ್ಕೂ ಬೆಳ್ಳುಳ್ಳಿ ಸಿಪ್ಪೆಯಲ್ಲಿ ಪರಿಹಾರವಿದೆ. ಬೆಳ್ಳುಳ್ಳಿ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿ ನಂತರ ಜೇನುತುಪ್ಪದೊಂದಿಗೆ ಬೆರೆಸಿ, ಬೆಳಿಗ್ಗೆ ಮತ್ತು ಸಂಜೆ ಸೇವಿಸಿ. ಬೆಳ್ಳುಳ್ಳಿ ಸಿಪ್ಪೆಯಿಂದ ಪಾದಗಳ ಊತವೂ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ, ಅದರಲ್ಲಿ ಪಾದಗಳನ್ನು ಅದ್ದಿಕೊಳ್ಳಬೇಕು. ಇದರಿಂದ ಶೀಘ್ರ ಪರಿಹಾರ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read