ಬೆಳಗಿನ ಉಪಹಾರಕ್ಕೆ ಬೇಡ ಈ ಅನಾರೋಗ್ಯಕರ ಆಹಾರ

 |

ಆರೋಗ್ಯವಾಗಿರಲು ಬೆಳಗಿನ ಉಪಹಾರ ಬಹಳ ಪ್ರಯೋಜನಕಾರಿ. ಬೆಳಗಿನ ಉಪಹಾರಕ್ಕೆ ಅದರದೆ ಮಹತ್ವವಿದೆ. ಬೆಳಗಿನ ಉಪಹಾರ ಆರೋಗ್ಯಕರವಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಆರೋಗ್ಯ ವೃದ್ಧಿಸುತ್ತದೆ.

ಬೆಳಗಿನ ಉಪಹಾರದಲ್ಲಿ ಎಂದೂ ಸಿಹಿ ಸೇವನೆ ಮಾಡಬಾರದು. ಬೆಳಗ್ಗೆ ಅತಿ ಹೆಚ್ಚು ಸಿಹಿ ಸೇವನೆ ಮಾಡುವುದ್ರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಹಿ ಸೇವನೆ ಮಾಡಬೇಡಿ.

ಬೆಳಗಿನ ಸಮಯದಲ್ಲಿ ಪರೋಟಾ ಸೇವನೆ ಕೂಡ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಬೆಳಗಿನ ಸಮಯದಲ್ಲಿ ಧಾನ್ಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲ ಧಾನ್ಯಗಳಲ್ಲಿ ಸಕ್ಕರೆ ಪ್ರಮಾಣವಿರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಬೆಳಗಿನ ಸಮಯದಲ್ಲಿ ಮಾಂಸ ಸೇವನೆ ಮಾಡಬಾರದು. ಇದ್ರಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಇದು ಚರ್ಮ ಸಮಸ್ಯೆ ಹಾಗೂ ಕ್ಯಾನ್ಸರ್ ನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಬ್ರೆಡ್ –ಜಾಮ್ ಎರಡು ಬೆಳಗಿನ ತಿಂಡಿಗೆ ಒಳ್ಳೆಯದಲ್ಲ. ಬ್ರೆಡ್ ಜೊತೆ ಮೊಟ್ಟೆ ಸೇವನೆ ಮಾಡಬಹುದು. ಆದ್ರೆ ಬ್ರೆಡ್ ಜೊತೆ ಜಾಮ್ ಬೆಳಗ್ಗೆ ಸೇವನೆ ಮಾಡಬಾರದು.

ತರಕಾರಿ, ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಬೆಳಿಗ್ಗೆ ಉಪಹಾರಕ್ಕೆ ಜ್ಯೂಸ್ ಸೇವನೆ ಮಾಡಬಾರದು. ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಸಿಡ್ ಇರುತ್ತದೆ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read