ಬುಧವಾರ ವ್ರತ ಆಚರಿಸಿ ಚಮತ್ಕಾರ ನೋಡಿ

ಶತ ಶತಮಾನಗಳಿಂದಲೂ ನಮ್ಮಲ್ಲಿ ಉಪವಾಸ ವ್ರತಗಳು ನಡೆಯುತ್ತಲೇ ಬಂದಿವೆ. ವಾರಕ್ಕೆ ತಕ್ಕಂತೆ ಆಯಾ ದೇವರ ಪೂಜೆಗಳು ಅವರಿಗೆ ಸಲ್ಲುವ ನೈವೇದ್ಯಗಳು, ಮಂತ್ರಗಳು, ಹರಕೆಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಬ್ಬೊಬ್ಬರು ಒಂದೊಂದು ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಬುಧವಾರ ಮಾಡುವ ವ್ರತದಿಂದ ಅನೇಕ ಲಾಭವಿದೆ.

ಬುಧವಾರ ಗಣೇಶನ ದಿನ. ಈ ದಿನ ಗಣೇಶ, ಬುಧ ಗ್ರಹದ ಆರಾಧನೆ ಮಾಡಲಾಗುತ್ತದೆ. ಬುಧವಾರ ವ್ರತದ ನಿಯಮಗಳನ್ನು ಚಾಚೂ ತಪ್ಪದೆ ಮಾಡುವುದರಿಂದ ಮನೆಯಲ್ಲಿನ ಒತ್ತಡಗಳು, ಕಲಹಗಳು ದೂರವಾಗುತ್ತವೆ.

ಬುಧವಾರ ವ್ರತದ ನಿಯಮಗಳು :  ಬುಧವಾರ ವ್ರತವನ್ನು ಯಾವುದಾದರೂ ಶುಕ್ಲಪಕ್ಷದ ಮೊದಲ ಬುಧವಾರದಿಂದ ಆರಂಭಿಸಬೇಕು. ಬುಧವಾರದ ವ್ರತದ ಸಂಖ್ಯೆ 21 ಅಥವಾ 41 ಆಗಿರುತ್ತದೆ. ಈ ವ್ರತ ಮಾಡುವಾಗ ಉಪ್ಪನ್ನು ತಿನ್ನಬಾರದು. ಸಿಹಿ ಅಥವಾ ಸಪ್ಪೆ ಊಟವನ್ನು ಮಾಡಬಹುದು.

ಬುಧವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಬುಧ ಯಂತ್ರವನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಈ ದಿನ ಹೆಸರು ಬೇಳೆಯ ಖಾದ್ಯವನ್ನು ನೈವೇದ್ಯ ಮಾಡಿ, ಅದನ್ನು ಪ್ರಸಾದದ ರೂಪದಲ್ಲಿ ವಿತರಿಸಬೇಕು. ವ್ರತ ಮಾಡುವವರು ಸಂಜೆ ಪ್ರಸಾದವನ್ನು ಸ್ವೀಕರಿಸಬೇಕು. ಭೋಜನ ಮಾಡುವ ಮೊದಲು ಬುಧನಿಗೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡಬೇಕು. ಊಟದ ಮೊದಲು ಹಸಿರು ಏಲಕ್ಕಿ ಮತ್ತು ಕರ್ಪೂರ ಮಿಶ್ರಿತ ನೀರಿನಿಂದ ಬುಧನಿಗೆ ಅರ್ಘ್ಯ ಬಿಡಬೇಕು. ವ್ರತದ ದಿನ ಬುಧ ಮಂತ್ರವಾದ ‘ಓಂ ಬ್ರಾಂ ಬ್ರೀಂ ಬ್ರೌ ಸಃ ಬುಧಾಯೇ ನಮಃ’ ವನ್ನು 9000 ಬಾರಿ ಜಪಿಸಬೇಕು.

ವ್ರತದ ಅಂತಿಮ ದಿನ ಹಣೆಗೆ ಬಿಳಿ ಚಂದನ ಮತ್ತು ಹಸಿರು ಏಲಕ್ಕಿಯನ್ನು ತೇಯ್ದು ಹಚ್ಚಿಕೊಳ್ಳಬೇಕು. ಈ ದಿನ ಹಸಿರು ಬಟ್ಟೆ ಧರಿಸಿದರೆ ಒಳ್ಳೆಯದು. ಅಂತಿಮ ದಿನದಂದು ಬುಧ ಮಂತ್ರದ ಹವನ ಮಾಡಿ, ದೇವರಿಗೆ ಪೂರ್ಣಾಹುತಿ ಅರ್ಪಿಸಿ ಬ್ರಾಹ್ಮಣರಿಗೆ ಸಿಹಿ ಭೋಜನ ಬಡಿಸಿ, ದಾನ ಮಾಡಬೇಕು. ಈ ಎಲ್ಲ ಪೂಜೆ, ದಾನಗಳನ್ನು ಮಾಡಿದಲ್ಲಿ ಬುಧವಾರದ ವ್ರತ ಮುಗಿದು ಒಳ್ಳೆಯ ಫಲ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read