ಬೆಂಗಳೂರಿಗರಿಗೆ ತಪ್ಪುತ್ತಿಲ್ಲ ಕೋತಿಗಳ ಕಾಟ…..! ಬಿಬಿಎಂಪಿ ಮೊರೆ ಹೋದರೂ ಸಿಕ್ತಿಲ್ಲ ಪರಿಹಾರ

ಮಂಗಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವಂತೆ ಬಿಬಿಎಂಪಿ ಮತ್ತು ಅರಣ್ಯ ಇಲಾಖೆಗೆ ಹೈಕೋರ್ಟ್ ಆದೇಶ ನೀಡಿದ ನಂತರವೂ ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ.

ನ್ಯಾಯಾಲಯದ ಆದೇಶಕ್ಕೆ ಸ್ಪಂದಿಸಿದ ಬಿಬಿಎಂಪಿ 6 ತಿಂಗಳ ಹಿಂದೆ ಕೋತಿಗಳನ್ನು ಸ್ಥಳಾಂತರಿಸಲು ಸಹಾಯವಾಣಿಯನ್ನು ಪ್ರಾರಂಭಿಸುವುದರ ಜೊತೆಗೆ ಹೊಸ ಎಸ್‌ಒಪಿ ಪರಿಚಯಿಸಿತು. ಆದಾಗ್ಯೂ ಈ ಕ್ರಮಗಳು ನಾಗರಿಕರ ಸಮಸ್ಯೆಯನ್ನು ನಿವಾರಿಸಲು ವಿಫಲವಾಗಿವೆ.

ಲಕ್ಕಸಂದ್ರದ ನಿವಾಸಿ ಬ್ಲೆಸ್ಸಿ ಇಸಾಕ್ ಮಾತನಾಡಿ, ”ಮಂಗಗಳು ಟೆರೇಸ್ ಮತ್ತು ಬಾಲ್ಕನಿಯಿಂದ ವಸ್ತುಗಳನ್ನು ಬೀಳಿಸುವಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ ಅವು ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ನಾನು ಬಿಬಿಎಂಪಿಗೆ ಕರೆ ಮಾಡಿದೆ. ಅಲ್ಲಿ ಪ್ರಾದೇಶಿಕ ಅರಣ್ಯ ಅಧಿಕಾರಿ ಸಂಪರ್ಕಿಸುವಂತೆ ನನಗೆ ನಿರ್ದೇಶನ ನೀಡಲಾಯ್ತು. ಆದರೆ ಹಲವಾರು ಅನುಸರಣೆಗಳ ನಂತರವೂ ಅಧಿಕಾರಿ ನಮಗೆ ಸಹಾಯ ಮಾಡಲಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

ಕೆಲವು ನಿವಾಸಿಗಳ ಪ್ರಕಾರ ಮಂಗಗಳು ಸ್ಥಳಾಂತರಗೊಂಡ ನಂತರವೂ ಹಿಂತಿರುಗುತ್ತವೆ. ನಮ್ಮ ಮನವಿಗಳಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮಂಗಗಳನ್ನು ಹಿಡಿಯುವ ಜ್ಞಾನದ ಕೊರತೆಯಿಂದ ಅರಣ್ಯ ಇಲಾಖೆಗೆ ತಿಳಿಸಿದರೆ, ಆದರೆ ಇದು ಸುಲಭದ ಕೆಲಸವಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ.

ಹೊಸ SOP ಪ್ರಕಾರ, ನಾವು ನೇರವಾಗಿ ಮಂಗಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಅನುಮತಿ ತೆಗೆದುಕೊಳ್ಳಬೇಕು, ಅದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ನಾವು ತರಬೇತಿ ಪಡೆದ ರಕ್ಷಕರನ್ನು ತೊಡಗಿಸಿಕೊಳ್ಳಬೇಕು ಮತ್ತು ಅವುಗಳನ್ನು ಸ್ಥಳಾಂತರಿಸಲು ನೈಸರ್ಗಿಕ ಆವಾಸಸ್ಥಾನವನ್ನು ಹುಡುಕಬೇಕು. ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ಅರಣ್ಯ ಅಧಿಕಾರಿ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read