ಬಿಕಿನಿ ಧರಿಸಿ ಹುಲ್ಲು ಕತ್ತರಿಸೋ ಯುವತಿ; ಭಾರೀ ಚರ್ಚೆಗೆ ಗ್ರಾಸವಾಗಿದೆ ಈ ಜಾಹೀರಾತು…..!

ಜಾಹೀರಾತು ಪ್ರಪಂಚ ತುಂಬಾ ವಿಶಿಷ್ಟವಾಗಿದೆ. ಜನರನ್ನು ತಮ್ಮತ್ತ ಸೆಳೆಯಲು ಕಂಪನಿಗಳು ಬಗೆಬಗೆಯ ಜಾಹೀರಾತುಗಳನ್ನು ಸೃಷ್ಟಿಸುತ್ತವೆ. ಇದೀಗ ಕೃತಕ ಹುಲ್ಲಿನ ಕುರಿತಾದ ಜಾಹೀರಾತೊಂದು ವೈರಲ್‌ ಆಗಿದೆ. ಈ ಜಾಹೀರಾತು ಕೃತಕ ಹುಲ್ಲು ತಯಾರಿಸುವ ಬ್ರಿಟಿಷ್ ಕಂಪನಿಯದ್ದು. ನಗರದ ಮಧ್ಯಭಾಗದಲ್ಲಿ ದೊಡ್ಡ ಬೋರ್ಡ್ ಅಳವಡಿಸಲಾಗಿದೆ. ಈ ಬೋರ್ಡ್‌ನಲ್ಲಿ ಕಂಪನಿ ಕಾಂಟಾಕ್ಟ್‌ ನಂಬರ್‌ ಜೊತೆಗೆ ಜಾಹೀರಾತನ್ನು ಪ್ರಕಟಿಸಿದೆ.

ಬಿಕಿನಿ ಧರಿಸಿದ ಯುವತಿಯೊಬ್ಬಳು ಹುಲ್ಲಿನ ಮೇಲೆ ಮಲಗಿರೋ ಫೋಟೋವನ್ನು ಹಾಕಲಾಗಿದೆ. ಚಿತ್ರದಲ್ಲಿ ಬಿಕಿನಿ ಧರಿಸಿರುವ ಯುವತಿ ತನ್ನ ಕೈಯಲ್ಲಿ ಸಣ್ಣ ಸಾಧನದೊಂದಿಗೆ ಹುಲ್ಲಿನ ಮೇಲೆ ಮಲಗಿದ್ದಾಳೆ. ಅದರ ಸಹಾಯದಿಂದ ಹುಲ್ಲನ್ನು ಕತ್ತರಿಸಿ ಸಮ ಮಾಡುತ್ತಿದ್ದಾಳೆ. ಮೈಮೇಲೆ ಪೂರ್ತಿ ಬಟ್ಟೆ ಇಲ್ಲದೆಯೂ ಮಲಗುವಷ್ಟು ಮೃದುವಾಗಿದೆ ಈ ಕೃತಕ ಹುಲ್ಲು ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಕಂಪನಿ ಮಾಡಿದೆ.

ಅನೇಕ ಕಡೆ ದೊಡ್ಡ ದೊಡ್ಡ ಬೋರ್ಡ್‌ಗಳಲ್ಲಿ ಈ ಜಾಹೀರಾತನ್ನು ಹಾಕಲಾಗಿದೆ. ಈ ಜಾಹೀರಾತು ವೈರಲ್‌ ಆಗುತ್ತಿದ್ದಂತೆ ಅದನ್ನು ವಿರೋಧಿಸಿ ಪ್ರತಿಭಟನೆಗಳೂ ನಡೆದಿವೆ. ಕೊನೆಗೂ ಕಂಪನಿ ಬಿಕಿನಿ ಫೋಟೋವನ್ನು ತೆಗೆದು ಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read