ಬಾಯ್‌ಫ್ರೆಂಡ್‌ಗಿಂತ ಸಿಕ್ಕಾಪಟ್ಟೆ ಎತ್ತರವಾಗಿದ್ದಾಳೆ ಈ ಯುವತಿ; ಜಾಲತಾಣದಲ್ಲಿ ವೈರಲ್‌ ಆಗಿದ್ದಾರೆ ಡಿಫರೆಂಟ್‌ ಜೋಡಿ…!

ಪ್ರೇಮಿಗಳು ಅಥವಾ ದಂಪತಿಗಳಲ್ಲಿ ಸಾಮಾನ್ಯವಾಗಿ ಮಹಿಳೆಯರ ಎತ್ತರ ಕಡಿಮೆ ಇರುತ್ತದೆ. ಅಂತಹ ಜೋಡಿಗಳ ಸಂಖ್ಯೆಯೇ ಹೆಚ್ಚು. ಆದರೆ ಇಂಗ್ಲೆಂಡ್‌ನಲ್ಲೊಂದು ವಿಶಿಷ್ಟ ಜೋಡಿಯಿದೆ. ಯುವತಿ ತನ್ನ ಬಾಯ್‌ಫ್ರೆಂಡ್‌ಗಿಂತಲೂ ಸಾಕಷ್ಟು ಎತ್ತರವಾಗಿದ್ದಾಳೆ. ಈಕೆಯ ಹೆಸರು ಲಿಜ್ಜಿ ಜೇಡ್ ಗ್ರೂಮ್‌ಬ್ರಿಡ್ಜ್. ಈಕೆಯ ಎತ್ತರ 6 ಅಡಿ 3 ಇಂಚು. ಅತಿಯಾದ ಎತ್ತರದಿಂದಾಗಿಯೇ ಆಕೆಗೆ ಇದುವರೆಗೂ ಬಾಯ್‌ಫ್ರೆಂಡ್‌ ಸಿಕ್ಕಿರಲಿಲ್ಲ.

ಕೊನೆಗೂ ಆಕೆಗೆ ಗೆಳೆಯನೊಬ್ಬ ಸಿಕ್ಕಿದ್ದಾನೆ. ಇಂಗ್ಲೆಂಡ್‌ನ ಕಾರ್ನ್‌ವಾಲ್‌ನ 29 ವರ್ಷದ ಜೇಮ್ಸ್, ಲಿಜ್ಜಿಯ ಪ್ರೀತಿಯಲ್ಲಿ ಬಿದ್ದಿದ್ದಾನೆ. 30 ವರ್ಷದ ಈ ಯುವಕನ ಎತ್ತರ 5 ಅಡಿ 8 ಇಂಚು. ಗೆಳತಿಗಿಂತಲೂ ತಾನು ಕುಳ್ಳಗಿದ್ದೇನೆಂದು ಜೇಮ್ಸ್‌ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಆತನಿಗೆ ಯಾವುದೇ ಅಭ್ಯಂತರವಿಲ್ಲವಂತೆ. ಶಾಲಾ ದಿನಗಳಿಂದಲೂ ಲಿಜ್ಜಿ ತನ್ನೆಲ್ಲಾ ಸಹಪಾಠಿಗಳಿಗಿಂತ ಎತ್ತರವಾಗಿದ್ದಳು. 15 ನೇ ವಯಸ್ಸಿನಲ್ಲಿಯೇ ಆಕೆ 6 ಅಡಿ ಎತ್ತರವಾಗಿದ್ದಳು.

ಸದ್ಯ ಈ ಡಿಫರೆಂಟ್‌ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಕೆಗೆ ಗೆಳೆಯ ಸಿಕ್ಕಿದ್ದಕ್ಕೆ ಎಲ್ಲರೂ ಅಭಿನಂದಿಸುತ್ತಿದ್ದಾರಂತೆ. ಅತಿಯಾದ ಎತ್ತರವಿದ್ದಾಳೆ ಎಂಬ ಕಾರಣಕ್ಕೆ ಬರುತ್ತಿದ್ದ ಟೀಕೆ, ಟಿಪ್ಪಣಿಗಳನ್ನೆಲ್ಲ ಯುವತಿ ಸಕಾರಾತ್ಮಕವಾಗಿ ಪರಿಗಣಿಸುತ್ತಿದ್ದಾಳಂತೆ. ಹಾಗಾಗಿ ತನ್ನಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಿದೆ ಎಂದಾಕೆ ಹೇಳಿಕೊಂಡಿದ್ದಾಳೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read