ಬಾಚಣಿಗೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ಪ್ರತಿ ಬಾರಿ ತಲೆ ಬಾಚುವಾಗಲೂ ಏನೋ ಒಂದು ಅರ್ಜೆಂಟು ಇದ್ದೇ ಇರುತ್ತದೆ. ಒಂದು ಎಲ್ಲಿಗೋ ಹೊರಡಬೇಕಿರುತ್ತದೆ, ಇಲ್ಲವೇ ಅಡುಗೆ ಮನೆಯಲ್ಲಿ ಕೆಲಸವಿರುತ್ತದೆ. ಹೀಗಾಗಿ ನಿಮ್ಮ ಬಾಚಣಿಗೆಯನ್ನು ಕ್ಲೀನ್ ಮಾಡಲು ಸಮಯವೇ ಸಿಗುತ್ತಿಲ್ಲ ಎಂದುಕೊಳ್ಳದಿರಿ. ಕಪ್ಪಾದ ನಿಮ್ಮ ಬಾಚಣಿಗೆಯನ್ನು ಹೊಸದರಂತೆ ಮಾಡಲು ಇಲ್ಲಿದೆ ಟಿಪ್ಸ್.

ಮೊದಲು ನಿಮ್ಮ ಬಾಚಣಿಗೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಕೂದಲನ್ನು ಬಿಡಿಸಿ. ಅದಕ್ಕೆ ಬೇಕಿದ್ದರೆ ಸೂಜಿಯ ಸಹಾಯ ಪಡೆದುಕೊಳ್ಳಿ. ಬಾಚಣಿಗೆ ತೊಳೆಯಲು ಬಿಸಿನೀರಿಗೆ ಶ್ಯಾಂಪೂ ಹಾಕಿ ಸ್ವಲ್ಪ ನೊರೆ ಬರಿಸಿ ಇಡಿ. ಅದರಲ್ಲಿ ಬಾಚಣಿಗೆ ನೆನೆಹಾಕಿ. ಸ್ವಲ್ಪ ಬೇಕಿಂಗ್ ಪೌಡರ್ ಸೇರಿಸಿ.

ಹಳೆಯ ಟೂತ್ ಬ್ರಶ್ ತೆಗೆದು ನೆನೆಸಿಟ್ಟ ಬಾಚಣಿಗೆ ಒಂದೊಂದೇ ಹಲ್ಲುಗಳನ್ನು ಬುಡದಿಂದ ತಿಕ್ಕಿ. ಬಳಿಕ ಕೈಯಿಂದ ತಿಕ್ಕಿ ತೊಳೆಯಿರಿ. ಟ್ಯಾಪ್ ನೀರಿನಡಿ ಬಾಚಣಿಗೆ ಹಿಡಿಯಿರಿ. ಬಳಿಕ ಬಿಸಿನಲ್ಲಿ ಒಣಗಿಸಿ ಅಥವಾ ಒಣಗಿದ ಬಟ್ಟೆಯಿಂದ ಒರೆಸಿ.

ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಹೀಗೆ ಮಾಡುವುದರಿಂದ ಹೊಟ್ಟಿನ ಸಮಸ್ಯೆಯಾಗಲಿ, ತಲೆಕೂದಲು ಉದುರುವ ಸಮಸ್ಯೆಯಾಗಲಿ ನಿಮ್ಮನ್ನು ಕಾಡುವುದಿಲ್ಲ. ಕೂದಲಿನ ಆರೈಕೆಯೊಂದಿಗೆ ಬಾಚಣಿಗೆಯನ್ನು ಸ್ವಚ್ಛವಾಗಿಡುವುದೂ ಬಹಳ ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read