ಬಳ್ಳಾರಿ ಉತ್ಸವದಲ್ಲಿ ಲೋಕಾರ್ಪಣೆಗೊಳ್ಳಲಿದೆ 23 ಅಡಿ ಎತ್ತರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಮೆ

ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ವರ್ಷಗಳೇ ಕಳೆದರೂ ಸಹ ಅವರ ನೆನಪು ಜನಸಾಮಾನ್ಯರಲ್ಲಿ ಚಿರಸ್ಥಾಯಿಯಾಗಿದೆ. ಇಂದಿಗೂ ಕೂಡ ರಾಜ್ಯದ ಪ್ರತಿ ಹಳ್ಳಿ, ಪಟ್ಟಣ, ನಗರಗಳಲ್ಲಿ ಪುನೀತ್ ರಾಜಕುಮಾರ್ ಅವರ ಕಟೌಟ್, ಪ್ರತಿಮೆಗಳು ರಾರಾಜಿಸುತ್ತಿವೆ.

ತಮ್ಮ ತಮ್ಮ ಊರಿನ ಬೀದಿಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಟ್ಟು ಜನ ಅವರನ್ನು ನಿತ್ಯವೂ ಸ್ಮರಿಸುತ್ತಿದ್ದಾರೆ. ಇದರ ಮಧ್ಯೆ ಜನವರಿ 21ರಂದು ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಳ್ಳಾರಿ ಉತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಬೃಹತ್ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.

23 ಅಡಿ, 3 ಟನ್ ತೂಕವಿರುವ ಈ ಬೃಹತ್ ಪ್ರತಿಮೆಯನ್ನು ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ ಶಿಲ್ಪಿ ಮತ್ತು ತಂಡದವರು ನಿರ್ಮಿಸಿದ್ದು, 40 ಅಡಿ ಉದ್ದದ 20 ಚಕ್ರದ ಲಾರಿಯಲ್ಲಿ ಇದನ್ನು ಸಾಗಿಸಲಾಗುತ್ತಿದೆ. 16 ಜನರ ತಂಡ ಹಗಲಿರುಳು ಎನ್ನದೆ ಮೂರು ತಿಂಗಳುಗಳ ಕಾಲ ಈ ಪ್ರತಿಮೆ ನಿರ್ಮಾಣಕ್ಕೆ ಕೆಲಸ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read