ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಅಜ್ಜಯ್ಯ ಭಾವಚಿತ್ರಕ್ಕೆ ನಮಿಸಿ ಆರ್ ಆರ್ ನಗರದ ಅಭ್ಯರ್ಥಿ ಕುಸುಮಾ, ಭೈರತಿ ಸುರೇಶ್ ಸೇರಿದಂತೆ ಕೆಲವರಿಗೆ ಬಿ ಫಾರಂ ವಿತರಿಸಿದರು. ಇದೇ ವೇಳೆ ಬಿ ಫಾರಂ ಪಡೆಯಲು ಪದ್ಮನಾಭನಗರ ಅಭ್ಯರ್ಥಿ ರಘುನಾಥ್ ನಾಯ್ಡು ಬಂದಿದ್ರು.
ಆದರೆ ಡಿ. ಕೆ.ಶಿವಕುಮಾರ್ ರಘುನಾಥ್ ನಾಯ್ಡುಗೆ ಬಿ ಫಾರಂ ನೀಡದೇ ಕುತೂಹಲ ಮೂಡಿಸಿದ್ರು. ಈ ಮೂಲಕ ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ವಿರುದ್ಧ ಮತ್ತಷ್ಟು ಪ್ರಬಲ ಅಭ್ಯರ್ಥಿ ನಿಲ್ಲಿಸುವ ವದಂತಿ ಬಗ್ಗೆ ಕುತೂಹಲ ಹೆಚ್ಚಾಯ್ತು. ಬಿ ಫಾರಂ ನೀಡದೇ ಇರೋದ್ರಿಂದ ರಘುನಾಥ್ ನಾಯ್ಡು ಬದಲು ಬೇರೆಯವರನ್ನು ನಿಲ್ಲಿಸಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
https://twitter.com/DKShivakumar/status/1646467564015595521