ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸುಲಭವಾಗಿ ನಿವಾರಿಸಲು ಈ ಟಿಪ್ಸ್

ಸಾಮಾನ್ಯವಾಗಿ ಟೊಮೆಟೊ ರಸ, ಇಂಕ್, ಬಣ್ಣಗಳ ಕಲೆಗಳು ಬಟ್ಟೆ ಮೇಲೆ ಬಿದ್ದರೆ ಸುಲಭವಾಗಿ ತೆಗೆಯಬಹುದು. ಆದರೆ ರಕ್ತದ ಕಲೆ ಬಿದ್ದರೆ ಅದು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಬಟ್ಟೆಯ ಮೇಲೆ ಬಿದ್ದ ರಕ್ತದ ಕಲೆಗಳನ್ನು ಸುಲಭವಾಗಿ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

*ಯಾವುದೇ ಕಲೆಗಳನ್ನು ತೆಗೆದುಹಾಕಲು ಹೈಡ್ರೋಜನ್ ಪೆರಾಕ್ಸೈಡ್ ಅತ್ಯುತ್ತಮವಾಗಿದೆ. ಹಾಗಾಗಿ 1 ಚಮಚ ಹೈಡ್ರೋಜನ್ ಪೆರಾಕ್ಸೈಡ್ ನ್ನು ಬಿಸಿ ನೀರಿನಲ್ಲಿ ಸೇರಿಸಿ ರಕ್ತದ ಕಲೆಯಿರುವ ಬಟ್ಟೆಗಳನ್ನು ನೆನೆಸಿಡಿ. ಸ್ವಲ್ಪ ಸಮಯದ ಬಳಿಕ ಬಟ್ಟೆಯನ್ನು ವಾಶ್ ಮಾಡಿ.

*ನಿಂಬೆ ರಸದಿಂದ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ನಿವಾರಿಸಬಹುದು. ಕಲೆಗಳ ಮೇಲೆ ನಿಂಬೆ ರಸವನ್ನು ಹಾಕಿ 10 ನಿಮಿಷ ಬಿಟ್ಟು ಉಜ್ಜಿ ವಾಶ್ ಮಾಡಿದರೆ ಕಲೆ ನಿವಾರಣೆಯಾಗುತ್ತದೆ.

*ಆಲ್ಕೋಹಾಲ್ ನ್ನು ಕಲೆಗಳ ಮೇಲೆ ಹಾಕಿ ಉಜ್ಜುವ ಮೂಲಕ ಕಲೆಗಳನ್ನು ತೆಗೆದು ಹಾಕಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read