ಬಟ್ಟೆಯಲ್ಲೇ ಆಗಲಿದೆ ವಿದ್ಯುತ್‌ ಉತ್ಪಾದನೆ, ಇದು MIT ಸಂಶೋಧಕರ ಹೊಸ ಆವಿಷ್ಕಾರ….!

ಪ್ರಸ್ತುತ ಯುಗದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದೆ. ಪ್ರತಿನಿತ್ಯ ಹೊಸದಾದ ಅದ್ಭುತ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. NASA ಮಾನವರನ್ನು ಚಂದ್ರನತ್ತ ಕಳುಹಿಸಲು ಆರ್ಟೆಮಿಸ್ ಕಾರ್ಯಾಚರಣೆಯನ್ನು ಪ್ರಾರಂಭಿದ್ರೆ, ಇತರ ಪ್ರಪಂಚದ ಪುರಾವೆಗಳನ್ನು ಕಂಡುಹಿಡಿಯಲು ಚೀನಾ ವೇಗದ ದೂರದರ್ಶಕವನ್ನು (ಐನೂರು-ಮೀಟರ್ ಅಪರ್ಚರ್ ಸ್ಫೆರಿಕಲ್ ಟೆಲಿಸ್ಕೋಪ್) ಆವಿಷ್ಕರಿಸಿದೆ.

ಸೌರಶಕ್ತಿಗೆ ಸಂಬಂಧಿಸಿದ ಹೊಸ ಆವಿಷ್ಕಾರವೊಂದು ಪೂರ್ಣಗೊಂಡ ತಕ್ಷಣ ಪ್ರಪಂಚದಾದ್ಯಂತದ ವಿಜ್ಞಾನಿಗಳ ಅನೇಕ ಕೆಲಸಗಳು ಸುಲಭವಾಗುತ್ತವೆ. MITಯ ಕೆಲವು ಸಂಶೋಧಕರು ಜಂಟಿಯಾಗಿ ಈ ಸಂಶೋಧನೆ ಮಾಡಿದ್ದಾರೆ. ಸೌರಶಕ್ತಿಯ ಗರಿಷ್ಠ ಪ್ರಯೋಜನವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಇಡೀ ವಿಶ್ವವೇ ಸಂಶೋಧನೆ ನಡೆಸುತ್ತಿದೆ. ಇದೀಗ MITಯ ಸಂಶೋಧಕರು ಕಾಗದದಂತೆ ಕಾಣುವ ಸೌರ ಫಲಕಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸೌರ ಫಲಕಗಳು ಮಾನವನ ಕೂದಲಿಗಿಂತಲೂ ತೆಳ್ಳಗಿರುತ್ತವೆ. ಈ ಹೊಸ ಸೌರ ಫಲಕಗಳು ಹಳೆಯ ಸೌರ ಫಲಕಗಳ ತೂಕದ ನೂರನೇ ಒಂದು ಭಾಗಕ್ಕೆ ಸಮನಾಗಿರುತ್ತವೆ.

ಪ್ರತಿ ಕಿಲೋಗ್ರಾಂಗೆ 18 ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ತುಂಬಾ ತೆಳುವಾಗಿರುವುದರಿಂದ ಈ ಸೌರ ಫಲಕಗಳು ಒಡೆಯುವ ಭೀತಿಯಿದ್ದು, ವಿಶೇಷ ಬಟ್ಟೆಯ ಮೇಲೆ ಅವುಗಳನ್ನು ಅಳವಡಿಸಲಾಗುವುದು. ಈ ಸೋಲಾರ್ ಪ್ಯಾನೆಲ್ ಹಾಕುತ್ತಿರುವ ಬಟ್ಟೆಗೆ ಡೈನೀಮಾ ಎಂದು ಹೆಸರಿಡಲಾಗಿದೆ. ಸೌರ ಫಲಕದ ಬಳಕೆ ಹೇಗೆ? ಈ ಹಗುರವಾದ ಸೌರ ಫಲಕದ ರಚನೆಯ ನಂತರ ಭಾರೀ ಸಾಂಪ್ರದಾಯಿಕ ಸೌರ ಫಲಕಗಳನ್ನು ಬಳಸಬೇಕಾಗಿಲ್ಲ. ಸಾರಿಗೆ ವೆಚ್ಚವೂ ಕಡಿಮೆಯಾಗುತ್ತದೆ. ಯಾವುದೇ ಟೆಂಟ್‌ನ ಮೇಲೂ ಇದನ್ನು ಅಳವಡಿಸಬಹುದು. ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಇದು ಅನುಕೂಲ ಮಾಡಿಕೊಡಲಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read