ಪ್ರೀ ವೆಡ್ಡಿಂಗ್ ಶೂಟ್ ಗೆ ಹೋಗುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೀ ವೆಡ್ಡಿಂಗ್ ಶೂಟ್ ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆಗಿದೆ. ಆದರೆ ಅದರಲ್ಲಿ ಪಾಲ್ಗೊಳ್ಳುವಾಗ ಈ ಕೆಳಗಿನ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಪ್ರಿ ವೆಡ್ಡಿಂಗ್ ಶೂಟ್ ವಿಭಿನ್ನವಾಗಿ ಇರಬೇಕು ಎಂಬುದೇನೋ ನಿಜ. ಆದರೆ ಇದು ಪ್ರಾಣಕ್ಕೆ ಕುತ್ತಾಗಬಾರದು. ರಿಸ್ಕ್ ತೆಗೆದುಕೊಂಡು ಶೂಟ್ ಮಾಡಬೇಕಿಲ್ಲ. ಕ್ರಿಯಾತ್ಮಕ ಫೋಟೋ ಶೂಟ್ ಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಕಿಲ್ಲ. ಹಾಗಾಗಿ ಸರಳವಾಗಿ, ಹೆಚ್ಚು ಅಪಾಯಕಾರಿ ಅಲ್ಲದ ಪ್ರದೇಶಗಳಲ್ಲಿ ಫೊಟೋ ಶೂಟ್ ಮಾಡಿಸಿ.

ಆಧುನಿಕತೆ ನಮ್ಮನ್ನು ಎಷ್ಟೇ ಆವರಿಸಿಕೊಂಡಿದ್ದರೂ ಸಾಂಪ್ರದಾಯಿಕತೆಯ ಚೌಕಟ್ಟಿನಿಂದ ಬಹುದೂರ ಹೋಗುವುದು ಒಳ್ಳೆಯದಲ್ಲ. ಫೋಟೋ ಶೂಟ್ ನೆಪದಲ್ಲಿ ವಿಪರೀತ ರೊಮ್ಯಾನ್ಸ್ ಮಾಡಿ, ಮದುವೆ ದಿನ ಅದನ್ನು ಸ್ಕ್ರೀನ್ ನಲ್ಲಿ ಪ್ಲೇ ಮಾಡುವುದು ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ. ಹಾಗಾಗಿ ಎಲ್ಲವೂ ಇತಿಮಿತಿಯಲ್ಲಿರಲಿ.

ಫೋಟೋಶೂಟ್ ಮಾಡಿಸಿಕೊಳ್ಳದಿರುವುದು ಅಪರಾಧವಲ್ಲ. ಎಲ್ಲಾ ವರ್ಗದವರಿಗೂ ಇದು ಸಾಧ್ಯವಾಗಲಿಕ್ಕಿಲ್ಲ. ಹಾಗಾಗಿ ಇದು ಸಾಧ್ಯವಾಗದಿದ್ದರೆ ಬೇಸರಿಸಿಕೊಳ್ಳದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read