ಪ್ರಾರ್ಥನೆ ವೇಳೆ ದೇವರ ವಿಗ್ರಹದಿಂದ ಬಿದ್ದ ಹೂವು…! ಸಂತಸ ಹಂಚಿಕೊಂಡ BSY

BS Yeddyurappa Says He Will Contest From Shikaripura Constituencyಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶನಿವಾರದಂದು ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಆರಾಧ್ಯ ದೈವ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರಿಗೆ ದೇವರ ಅನುಗ್ರಹವಾಗಿದೆ.

ಹೌದು, ಹುಚ್ಚರಾಯಸ್ವಾಮಿ ದರ್ಶನ ಮಾಡಿ ಯಡಿಯೂರಪ್ಪನವರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ವಿಗ್ರಹದ ಎದೆಯ ಭಾಗದಿಂದ ಹೂವು ಬಿದ್ದಿದೆ. ಈ ವಿಷಯವನ್ನು ಸ್ವತಃ ಹಂಚಿಕೊಂಡ ಯಡಿಯೂರಪ್ಪನವರು ನಮಗೆ ದೇವರು ಅನುಗ್ರಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರ ಚುನಾವಣಾ ರಾಜಕೀಯಕ್ಕೆ ಸಿದ್ಧತೆ ನಡೆಸಿದ್ದು ಶಿಕಾರಿಪುರದಿಂದ ಕಣಕ್ಕಿಳಿಸಲು ಬಯಸಿದ್ದಾರೆ. ಈ ಸಂದರ್ಭದಲ್ಲಿ ಶಿಕಾರಿಪುರದ ಆರಾಧ್ಯ ದೈವ ಹುಚ್ಚರಾಯಸ್ವಾಮಿ ಹೂವು ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read