ಪ್ರವಾಸಿಗರ ನೆಚ್ಚಿನ ತಾಣ ʼಮುನ್ನಾರ್ʼ

ಚುಮುಚುಮು ಚಳಿಯಲ್ಲಿ ಮುನ್ನಾರ್ ಭೇಟಿ ಮನಸ್ಸಿಗೆ ಮುದ ನೀಡುವುದು  ಗ್ಯಾರಂಟಿ. ಅಷ್ಟು ಸುಂದರವಾಗಿದೆ ಈ ಪ್ರವಾಸಿ ತಾಣ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಇದು ಪ್ರವಾಸಿಗರ ನೆಚ್ಚಿನ ತಾಣ ಕೂಡ ಹೌದು.

ಇಲ್ಲಿನ ಆರ್ಕಷಕ ಟೀ ಪ್ಲಾಂಟೇಶನ್ ಗಳು, ನಯನ ಮನೋಹರ ಪಟ್ಟಣ, ರಜಾ ದಿನದ ಸೌಕರ್ಯಗಳು ಈ ಪಟ್ಟಣವನ್ನೇ ಜನಪ್ರಿಯ ರೆಸಾರ್ಟ್ ಆಗಿ ಬದಲಾಯಿಸಿದೆ. ರಜಾ ದಿನಗಳನ್ನು ಕಳೆಯಲು ಇದು ಒಳ್ಳೆಯ ಜಾಗವೆನ್ನಬಹುದು.

ಮುನ್ನಾರ್ ಎಂದರೆ ಮೂರು ನದಿಗಳು ಎಂದರ್ಥ. ಇಲ್ಲಿ ಮಧುರಪುಳ, ನಲತಣ್ಣಿ ಮತ್ತು ಕುಂಡಲಿ ಎಂಬ ಮೂರು ನದಿಗಳು ಹರಿಯುತ್ತದೆ. ಮುನ್ನಾರ್‌ ನ ಸಮೀಪದಲ್ಲಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಎರವಿಕುಲಮ್ ರಾಷ್ಟ್ರೀಯ ಉದ್ಯಾನವನವೂ ಒಂದಾಗಿದೆ.

ಇನ್ನು ಪ್ರವಾಸಿಗರಿಗೆ ಇನ್ನೊಂದು ಅಚ್ಚರಿಯನ್ನು ನೀಡುವ ಮುನ್ನಾರ್ ಪಟ್ಟಣದಿಂದ 13 ಕಿ.ಮೀ. ದೂರದಲ್ಲಿ ಇರುವ ಸ್ಥಳವೇ ಮಟ್ಟುಪೆಟ್ಟಿಯಾಗಿದೆ.ಇದು ದೋಣಿ ನಡೆಸುವವರಿಗೆ ಅದ್ಭುತ ಅವಕಾಶ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read