ಪ್ರಭಾಸ್ ಅಭಿನಯದ ಚಿತ್ರದಲ್ಲಿ ವಿಲನ್‌ ರೋಲ್‌ಗಾಗಿ ಕಮಲ್‌ ಹಾಸನ್‌ಗೆ 150 ಕೋಟಿ ರೂಪಾಯಿ ಆಫರ್‌….! ಇಲ್ಲಿದೆ ಅದರ ಸತ್ಯಾಸತ್ಯತೆ

ನಟ ಕಮಲ್ ಹಾಸನ್ ಸದ್ಯ ಶಂಕರ್ ಅವರ ‘ಇಂಡಿಯನ್ 2’ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರಭಾಸ್ ಹೀರೋ ಆಗಿ ಅಭಿನಯಿಸುತ್ತಿರುವ ಚಿತ್ರವೊಂದರಲ್ಲಿ ವಿಲನ್‌ ರೋಲ್‌ಗಾಗಿ ಕಮನ್‌ ಹಾಸನ್‌ಗೆ ಆಫರ್‌ ಬಂದಿದೆ. ನಿರ್ಮಾಪಕರು ಪ್ರಸ್ತುತ ಕಮಲ್ ಹಾಸನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಈ ಪ್ರಾಜೆಕ್ಟ್‌ಗೆ ಅವರಿನ್ನೂ ಸೈನ್‌ ಮಾಡಿಲ್ಲ. ಪ್ರಭಾಸ್ ಅಭಿನಯದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಶ್ವಿನಿ ದತ್ ಈ ಚಿತ್ರದ ನಿರ್ಮಾಪಕರು. ವಿಲನ್‌ ರೋಲ್‌ಗಾಗಿ ಕಮಲ್‌ ಹಾಸನ್‌ ಅವರಿಗೆ 150 ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಆಫರ್‌ ನೀಡಲಾಗಿದೆ ಅನ್ನೋ ಸುದ್ದಿ ಕೂಡ ಕೇಳಿಬಂದಿತ್ತು. ಆದರೆ ಮೂಲಗಳ ಪ್ರಕಾರ ಈ ಪಾತ್ರಕ್ಕಾಗಿ ಕಮಲ್‌ ಹಾಸನ್ಗೆ 150 ಕೋಟಿ ರೂಪಾಯಿ ಆಫರ್ ಮಾಡಿಲ್ಲ ಎನ್ನಲಾಗ್ತಿದೆ. ಆದರೆ ಕಮಲ್‌ ಹಾಸನ್‌ಗೆ ಆಫರ್‌ ಮಾಡಿರೋ ಮೊತ್ತ ಎಷ್ಟು ಅನ್ನೋದು ಖಚಿತವಾಗಿಲ್ಲ.

ಈ ಪ್ರಾಜೆಕ್ಟ್‌ ಅನ್ನು ಅವರು ಒಪ್ತಾರೋ ಇಲ್ಲವೋ ಅನ್ನೋದು ಕೂಡ ದೃಢಪಟ್ಟಿಲ್ಲ. ಪ್ರಭಾಸ್‌ ಅಭಿನಯದ ಈ ಸಿನೆಮಾದ ಚಿತ್ರೀಕರಣ ಶೇ.70ರಷ್ಟು ಪೂರ್ಣಗೊಂಡಿದೆ. ಇದೊಂದು ವೈಜ್ಞಾನಿಕ ಕಾಲ್ಪನಿಕ ಚಿತ್ರ. ಚಿತ್ರದಲ್ಲಿ ಗ್ರಾಫಿಕ್ಸ್‌ ಹೆಚ್ಚಿದೆ. ಗ್ರಾಫಿಕ್ಸ್ ಕೆಲಸ ಕಳೆದ 5 ತಿಂಗಳುಗಳಿಂದ ನಡೆಯುತ್ತಿದೆ. ಮುಂದಿನ ವರ್ಷ ಸಿನೆಮಾ ತೆರೆಗೆ ಬರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read