ಪ್ರಧಾನಿ ನರೇಂದ್ರ ಮೋದಿಯವರು ಜನವರಿ 27ರಂದು ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’ ನಡೆಸಲಿದ್ದು, ಇದಕ್ಕಾಗಿ ಒಟ್ಟು 31.24 ಲಕ್ಷ ವಿದ್ಯಾರ್ಥಿಗಳು, 5.6 ಲಕ್ಷ ಶಿಕ್ಷಕರು ಹಾಗೂ 1.95 ಲಕ್ಷ ಪೋಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ.
ನವದೆಹಲಿಯ ತಲಕತೋರಾ ಸ್ಟೇಡಿಯಂನಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದ್ದು, ನೇರವಾಗಿ ಭಾಗವಹಿಸುವುದರ ಜೊತೆಗೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.
2018 ರಿಂದಲೂ ನರೇಂದ್ರ ಮೋದಿಯವರು ಪ್ರತಿ ವರ್ಷ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, ಈ ಬಾರಿಯೂ ಪರೀಕ್ಷೆ ಹಿನ್ನೆಲೆಯಲ್ಲಿ ಜನವರಿ 27ರಂದು ಈ ಕಾರ್ಯಕ್ರಮ ನಡೆಯಲಿದೆ.
#ParikshaPeCharcha2023 Date Announced!
The wait is over! #PPC2023 is going to be held on 27th January 2023 at Talkatora Indoor Stadium, New Delhi.
Hon’ble PM Shri @narendramodi will interact with students, parents, and teachers. Stay Tuned! #ExamWarriors pic.twitter.com/9DVFiReEaQ
— Ministry of Education (@EduMinOfIndia) January 3, 2023