‘ಪುಷ್ಪಾ’ ಆಗಿ ಬದಲಾದ ಕ್ರಿಕೆಟಿಗ ಡೇವಿಡ್ ವಾರ್ನರ್

 ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುಷ್ಪ 2 ಚಿತ್ರದ ಟ್ರೆಂಡಿಂಗ್ ಪೋಸ್ಟರ್‌ಗೆ ತಮ್ಮ ಮುಖವನ್ನು ಮಾರ್ಫ್ ಮಾಡಿದ್ದಾರೆ.

ಕ್ರಿಕೆಟ್ ಜೊತೆಗೆ ಡೇವಿಡ್ ವಾರ್ನರ್ ದಕ್ಷಿಣ ಭಾರತದ ಚಲನಚಿತ್ರಗಳ ಮೇಲಿನ ಒಲವಿಗಾಗಿ ಜನಪ್ರಿಯರಾಗಿದ್ದಾರೆ.
ಪುಷ್ಪ 2 ಪೋಸ್ಟರ್ ನಂತೆ ಸಂಪೂರ್ಣವಾಗಿ ರೂಪಾಂತರಗೊಂಡ ತಮ್ಮ ನೋಟವನ್ನು ವಾರ್ನರ್ ಇನ್ ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.

ವಾರ್ನರ್ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಧರಿಸಿದ್ದ ಅದೇ ಆಭರಣಗಳು ಮತ್ತು ಸೀರೆಯೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ವಾರ್ನರ್ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಲವಾರು ಅಭಿಮಾನಿಗಳು ವಾರ್ನರ್ ನೋಟಕ್ಕೆ ಫಿದಾ ಆಗಿದ್ದು ‘ಸರ್ ಮೊದಲು ನೀವು ಹೈದರಾಬಾದ್‌ಗೆ ಬಂದು ಪುಷ್ಪಾ ಚಿತ್ರದಲ್ಲಿ ನಟಿಸಿ’ ಎಂದು ಹೇಳಿದ್ದಾರೆ.

ಏಪ್ರಿಲ್ 7 ರಂದು ಅಲ್ಲು ಅರ್ಜುನ್ ವಿಭಿನ್ನವಾಗಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಬಿಡುಗಡೆಯಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read