ಪುದೀನಾ ಎಲೆ ವೃದ್ಧಿಸುತ್ತೆ ಮುಖದ ʼಸೌಂದರ್ಯʼ

ಆಹಾರಕ್ಕೆ ಬಳಸುವ ಪುದೀನಾ ಎಲೆ ಚರ್ಮಕ್ಕೆ ಹೊಸ ತಾಜಾತನ ಕೊಡುವ ಶಕ್ತಿ ಹೊಂದಿದೆ. ಅಷ್ಟೇ ಅಲ್ಲ ಕೂದಲ ಸೌಂದರ್ಯಕ್ಕೂ ಇದರ ಕೊಡುಗೆ ಇದೆ. ಪುದೀನಾದಿಂದ ಹೇಗೆ ಸೌಂದರ್ಯ ರಕ್ಷಣೆ ಮಾಡಿಕೊಳ್ಳಬಹುದು ಅಂತ ತಿಳಿಯೋಣ.

ಪುದೀನಾ ಹೇರ್ ಪ್ಯಾಕ್

ಮೊದಲಿಗೆ ಒಂದು ಚಮಚ ರುಬ್ಬಿದ ಪುದೀನಾ ಪೇಸ್ಟ್ ಅನ್ನು ಅರ್ಧ ಕಪ್ ಮೊಸರಿನಲ್ಲಿ ಮಿಶ್ರಣ ಮಾಡಿ. ತಲೆ ಬುರುಡೆಗೆ ಹಚ್ಚಿ ಪ್ಯಾಕ್ ಮಾಡಿ. ಹತ್ತು ನಿಮಿಷದ ನಂತರ ವಾಶ್ ಮಾಡಿ. 15 ದಿನಕ್ಕೊಮ್ಮೆ ಈ ಅಭ್ಯಾಸ ರೂಢಿಸಿಕೊಂಡಲ್ಲಿ ಹೊಟ್ಟಿನ ಸಮಸ್ಯೆಗೆ ವಿರಾಮ ಹಾಕಬಹುದು.

ಪುದೀನಾ ಫೇಸ್ ಪ್ಯಾಕ್

ಸಮಪ್ರಮಾಣದಲ್ಲಿ ಪುದೀನಾ ಹಾಗೂ ಮುಲ್ತಾನಿ ಮಿಟ್ಟಿಯನ್ನು ಮಿಕ್ಸ್ ಮಾಡಿ ನೀರಿನಲ್ಲಿ ಬೆರೆಸಿ. ಮೊಡವೆಗಳ ಮೇಲೆ ಹಚ್ಚಿ. ಒಣಗಿದ ನಂತರ ಮುಖ ತೊಳೆಯಬೇಕು. ಆಗಾಗ ಈ ಪ್ಯಾಕನ್ನು ಹಾಕಿಕೊಳ್ಳಬಹುದು. ಆದರೆ ಹೆಚ್ಚು ಹೊತ್ತು ಬಿಡಬಾರದು. ಕೆಲವರಿಗೆ ಹಾಗೂ ಹೀಟ್ ಬಾಡಿ ಹೊಂದಿರುವವರಿಗೆ ಇದು ಹೊಂದುವುದಿಲ್ಲ. ಹಾಗಾಗಿ ಅಂತಹವರು ಬಳಸದೆ ಇರುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read