ಪಿರಿಯಡ್ಸ್ ಸಮಯದಲ್ಲಿ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅಪಾಯ ಖಚಿತ…!

ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ. ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಟ್ಟೆನೋವು, ಬೆನ್ನುನೋವು, ಕೋಪ, ಕಿರಿಕಿರಿ, ತಲೆನೋವು ಹೀಗೆ ಹತ್ತಾರು ರೀತಿಯ ತೊಂದರೆಗಳಾಗುತ್ತವೆ.

ಇವೆಲ್ಲದರ ಜೊತೆಗೆ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳೂ ಆಗುತ್ತವೆ. ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ವಿಪರೀತ ನೋವು ಅನುಭವಿಸುತ್ತಾರೆ. ಕೆಲವರಿಗೆ ರಕ್ತಸ್ರಾವ ಜಾಸ್ತಿಯಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಇಂತಹ ಕೆಲವೊಂದು ವಿಶೇಷ ಲಕ್ಷಣಗಳು ಕಾಣಿಸಿಕೊಂಡರೆ ಅವುಗಳನ್ನು ನಿರ್ಲಕ್ಷಿಸಬೇಡಿ.

ವಿಪರೀತ ರಕ್ತಸ್ರಾವ

ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

ವಿಪರೀತ ನೋವು

ಋತುಚಕ್ರದ ಸಮಯದಲ್ಲಿ ಕೆಲವರಿಗೆ ಅತಿಯಾದ ನೋವು ಬರಬಹುದು. ಹಾಗಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಅತಿಯಾದ ನೋವು ಕೆಲವು ರೋಗಗಳ ಸಂಕೇತವಾಗಿರುತ್ತದೆ.

ಪೃಷ್ಠ ಭಾಗದಲ್ಲಿ ಸೆಳೆತಋತುಚಕ್ರದ ಸಮಯದಲ್ಲಿ ಪೃಷ್ಠದ ನೋವು ಇದ್ದರೆ ಅದು ಹಾರ್ಮೋನ್ ಅಸಮತೋಲನವನ್ನು ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಸ್ತನ ಮೃದುತ್ವ

ಕೆಲವರಿಗೆ ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲೂ ಬದಲಾವಣೆಗಳಾಗುತ್ತವೆ. ಮೃದುತ್ವವನ್ನು ನೀವು ಅನುಭವಿಸಿದರೆ  ಈಸ್ಟ್ರೊಜೆನ್‌ನಲ್ಲಿ ಏರಿಳಿತಗಳಿವೆ ಎಂದು ಅರ್ಥಮಾಡಿಕೊಳ್ಳಿ.

ರಕ್ತದಲ್ಲಿ ಗಂಟಾಗುವುದು

ಪಿರಿಯಡ್ಸ್ ಸಮಯದಲ್ಲಿ ಕೆಲವರಿಗೆ ರಕ್ತ ಗಂಟು ಗಂಟಾಗುತ್ತದೆ. ರಕ್ತಸ್ರಾವದ ವೇಳೆ ಇದು ಗಮನಕ್ಕೆ ಬರುತ್ತದೆ. ಇದನ್ನು ಅಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ.

ರಕ್ತದ ಬಣ್ಣ

ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣವು ಬಹಳಷ್ಟು ಸಂಗತಿಗಳನ್ನು ಹೇಳುತ್ತದೆ. ರಕ್ತದ ಬಣ್ಣವು ತುಂಬಾ ಗಾಢವಾಗಿದ್ದರೆ ಅದು ಸಹ ಕೆಲವೊಂದು ರೋಗದ ಚಿಹ್ನೆಯಾಗಿರಬಹುದು. ಇದು ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ಸೂಚಿಸುತ್ತದೆ.

PCOD ಮತ್ತು PCOS ನಂತಹ ಕಾಯಿಲೆಗಳಿದ್ದರೆ ಮುಟ್ಟಿನ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವೊಂದು ಲಕ್ಷಣಗಳು ಕ್ಯಾನ್ಸರ್‌ ರೋಗದ ಸಂಕೇತವೂ ಇರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read