ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಒಂದೇ ದಿನ ಸಾವನ್ನಪ್ಪಿದ ಅವಳಿ ಸಹೋದರರು…!

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಸಹ ಅವಳಿ ಸಹೋದರರಿಬ್ಬರೂ ಒಂದೇ ದಿನ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

26 ವರ್ಷದ ಈ ಅವಳಿ ಸಹೋದರರು ರಾಜಸ್ಥಾನದ ಬಾಡಮೇರ್ ಮೂಲದವರಾಗಿದ್ದು ಸುಮೇರ್ ಸಿಂಗ್ ಎಂಬವರು ಸೂರತ್ ನಲ್ಲಿದ್ದು, ಅವರ ಸಹೋದರ ಸೋಹನ್ ಸಿಂಗ್ ಜೈಪುರದಲ್ಲಿ ವಾಸಿಸುತ್ತಿದ್ದರು.

ಸೂರತ್ ನಲ್ಲಿ ವಾಸಿಸುತ್ತಿದ್ದ ಸುಮೇರ್ ಸಿಂಗ್ ಮನೆಯ ತಾರಸಿ ಮೇಲೆ ಫೋನಿನಲ್ಲಿ ಮಾತನಾಡುವಾಗ ಆಯತಪ್ಪಿ ಮೃತಪಟ್ಟಿದ್ದರು. ಈ ವಿಷಯ ತಿಳಿದು ಮನೆಗೆ ಬಂದಿದ್ದ ಸೋಹನ್ ಸಿಂಗ್ ಕೂಡ ಕಾಲು ಜಾರಿ ನೀರಿನ ಟ್ಯಾಂಕಿಗೆ ಬಿದ್ದು ಮೃತಪಟ್ಟಿದ್ದಾರೆ. ಆದರೆ ಸೋಹನ್ ಸಿಂಗ್ ಅವರ ಸಾವು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read