ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ನವವಿವಾಹಿತೆ ಕತ್ತು ಹಿಸುಕಿ ಕೊಲೆ

ಪತಿಯ ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕಾಗಿ ನವವಿವಾಹಿತೆಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯ ಅಲಾಪುರ್ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಕೊಲೆಯಾದ ಮಹಿಳೆಯನ್ನು ನಿಶಾ ಎಂದು ಗುರುತಿಸಲಾಗಿದೆ. ನಿಶಾ ಹಾಗೂ ಡಾ ಮುಕೇಶ್ ಕುಮಾರ್ ವಿವಾಹ ಫೆಬ್ರವರಿ 28, 2023ರಂದು ನಡೆದಿತ್ತು. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ, ಮುಖೇಶ್‌ಗೆ ಅಕ್ರಮ ಸಂಬಂಧ ಇರುವ ವಿಚಾರ ಪತ್ನಿ ನಿಶಾ ಗಮನಕ್ಕೆ ಬಂದಿತ್ತು. ಇದನ್ನು ನಿಶಾ ವಿರೋಧಿಸಿದ್ದಳು. ಇದೇ ವಿಚಾರಕ್ಕೆ ಪತಿ ಪತ್ನಿಯ ನಡುವೆ ಆಗಾಗ ಜಗಳವಾಗುತಿತ್ತು ಎಂದು ತಿಳಿದುಬಂದಿದೆ.

ತನ್ನ ಪತಿಯ ಈ ಅಕ್ರಮ ಸಂಬಂಧದ ಬಗ್ಗೆ ನಿಶಾ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಳು. ತನ್ನ ಮತ್ತು ಮುಖೇಶ್ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಬಗ್ಗೆಯೂ ಹೇಳಿದ್ದಳು. ಹೀಗಾಗಿ ನಿಶಾ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಶಾ ಸಾವಿಗೆ ಆಕೆಯ ಗಂಡನ ಮನೆಯವರೇ ಕಾರಣ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಶಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಆದರೆ ಆಲಾಪುರದಲ್ಲಿರುವ ನಿಶಾ ಗಂಡನ ಮನೆಯ ಮುಂದೆ ಅಂತಿಮ ವಿಧಿವಿಧಾನಗಳನ್ನು ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಪ್ರಕರಣ ಸಂಬಂದ ನಿಶಾ ಪತಿ ಮುಕೇಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read