ಪತಿಯನ್ನು ಲಾಡ್ಜ್ ನಲ್ಲೇ ಲಾಕ್ ಮಾಡಿ ಪತ್ನಿ ಎಸ್ಕೇಪ್; ಶಿವಮೊಗ್ಗದಲ್ಲೊಂದು ವಿಲಕ್ಷಣ ಘಟನೆ

ತನ್ನ ಪತಿಯೊಂದಿಗೆ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ವಾಪಸ್ ಊರಿಗೆ ತೆರಳುವಾಗ ಲಾಡ್ಜ್ ಮಾಡಿದ್ದು, ಪತಿ ಬಾತ್ ರೂಮಿಗೆ ಹೋದ ವೇಳೆ ರೂಮ್ ಗೆ ಲಾಕ್ ಹಾಕಿಕೊಂಡು ಪತ್ನಿ ಎಸ್ಕೇಪ್ ಆಗಿದ್ದಾಳೆ. ಇದೀಗ ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಇಂಥದೊಂದು ವಿಲಕ್ಷಣ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಹಾವೇರಿ ಜಿಲ್ಲೆಯ ಶ್ರೀಕಾಂತ್ ಎಂಬಾತ ತನ್ನ ಪತ್ನಿ ತೇಜಸ್ವಿನಿ ಜೊತೆ ಲಕ್ಕವಳ್ಳಿಯಲ್ಲಿನ ಮಾವನ ಮನೆಗೆ ಬಂದಿದ್ದರು. ವಾಪಸ್ ಊರಿಗೆ ಹೋಗುವಾಗ ಪತ್ನಿ ಶಿವಮೊಗ್ಗದ ಲಾಡ್ಜ್ ನಲ್ಲಿ ರೂಮ್ ಮಾಡುವಂತೆ ಒತ್ತಾಯಿಸಿದ್ದು, ಇದಕ್ಕೆ ಮಣಿದ ಶ್ರೀಕಾಂತ್ ರೂಮ್ ಮಾಡಿದ್ದಾರೆ.

ಸಂಜೆ ಶ್ರೀಕಾಂತ್ ಬಾತ್ರೂಮಿಗೆ ಹೋದಾಗ ಆತನ ಪತ್ನಿ ತೇಜಸ್ವಿನಿ ಮೊಬೈಲ್ ಫೋನ್, ಪರ್ಸ್, ಬ್ಯಾಗ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ. ಜೊತೆಗೆ ಹೋಗುವ ಮುನ್ನ ರೂಮಿಗೆ ಹೊರಗಿನಿಂದ ಲಾಕ್ ಮಾಡಿದ್ದಾರೆ. ರೂಮ್ ಬಾಯ್ ಸಹಾಯದಿಂದ ಬಾಗಿಲು ತೆಗೆಸಿ ಹೊರಬಂದ ಶ್ರೀಕಾಂತ್, ಇದೀಗ ಪತ್ನಿಯನ್ನು ಹುಡುಕಿ ಕೊಡುವಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read