ನೋಡಿ ಬನ್ನಿ ತಮಿಳುನಾಡಿನ ʼಚಿದಂಬರಂʼ ದೇವಾಲಯ

ಚಿದಂಬರಂ ದೇವಾಲಯ - ವಿಕಿಪೀಡಿಯ

ಚಿದಂಬರಂ ದೇವಾಲಯವು ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ನಗರದ ಹೃದಯ ಭಾಗದಲ್ಲಿದೆ. ಈ ನಗರ ತಮಿಳುನಾಡಿನ ಕಡಲೂರು ಎಂಬ ಜಿಲ್ಲೆಗೆ ಸೇರಿದೆ.

ವಿಶ್ವಕರ್ಮರ ಪರಂಪರೆಯ ಗುಂಪು ಈ ದೇವಾಲಯದ ಜೀರ್ಣೋದ್ಧಾರದ ಪ್ರಧಾನ ಶಿಲ್ಪಿ. ಇದು ಶಿವನ ಪವಿತ್ರ ಐದು ದೇವಾಲಯಗಳಲ್ಲಿ ಒಂದು. ಪ್ರತಿಯೊಂದು ದೇವಾಲಯವೂ ಪಂಚಭೂತಗಳನ್ನು ಸೂಚಿಸುತ್ತದೆ. ಇವುಗಳಲ್ಲಿ ಚಿದಂಬರಂ ದೇವಾಲಯ ಆಕಾಶವನ್ನು ಸೂಚಿಸುತ್ತದೆ.

ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಆಭರಣಾಲಂಕೃತನಾದ ನಟರಾಜನ ವಿಗ್ರಹ. ಶಿವನನ್ನು ಲಿಂಗ ರೂಪಕ್ಕೆ ಬದಲಾಗಿ ಮಾನವನ ಅವತಾರದ ಮೂರ್ತಿಯಲ್ಲಿಟ್ಟ ಕೆಲವೇ ದೇವಾಲಯಗಳಲ್ಲಿ ಇದೂ ಒಂದು. ನಟರಾಜನ ವಿಶ್ವ ನರ್ತನವು ವಿಶ್ವದ ಚಲನ ವಲನಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡದ್ದನ್ನು ಸೂಚಿಸುತ್ತದೆ. ದೇವಾಲಯಕ್ಕೆ ಐದು ಅಂಗಣಗಳಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read