ನೆನೆಸಿದ ಹಸಿರು ಕಡಲೆಯಲ್ಲಿದೆ ಆರೋಗ್ಯದ ಗುಟ್ಟು, ಅನೇಕ ರೋಗಗಳಿಗೂ ಇದು ಮದ್ದು!

ಈಗ ಹಸಿರು ಕಡಲೆಯ ಸೀಸನ್‌. ಇದು ಚಳಿಗಾಲದ ತರಕಾರಿ. ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂತಹ ಖನಿಜಗಳ ಉಗ್ರಾಣ ಈ ಹಸಿರು ಕಡಲೆ. ಅದಕ್ಕಾಗಿಯೇ ಅವು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಹಸಿರು ಕಡಲೆಯನ್ನು ಪಲ್ಯ , ಬಾಜಿ ಮಾಡಿ ಸೇವಿಸುತ್ತೇವೆ. ಹಸಿರು ಕಡಲೆ ತಿನ್ನಲು ಬಹಳ ರುಚಿಯಾಗಿರುತ್ತವೆ. ಜೊತೆಗೆ ಅನೇಕ ಅದ್ಭುತ ಪ್ರಯೋಜನಗಳನ್ನೂ ಇವು ಹೊಂದಿವೆ. ಇವುಗಳನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು, ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಒತ್ತಡದಿಂದ ಮುಕ್ತಿ: ಹಸಿರು ಕಡಲೆಯಲ್ಲಿ ವಿಟಮಿನ್ ಬಿ 9 ಅಥವಾ ಫೋಲೇಟ್‌ನಂತಹ ಗುಣಗಳು ಸಮೃದ್ಧವಾಗಿವೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಮನಸ್ಥಿತಿ ಬದಲಾವಣೆಯಾಗುತ್ತದೆ. ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ದೂರವಿರಬಹುದು. ಇದನ್ನು ಸಲಾಡ್‌ ರೂಪದಲ್ಲಿ ಸೇವಿಸಿ, ಅಥವಾ ಚಾಟ್ ಮಾಡಿ ತಿನ್ನಬಹುದು.

ತೂಕ ಇಳಿಕೆ: ಹಸಿರು ಕಡಲೆಯಲ್ಲಿ ಫೈಬರ್‌ ಅಂಶಗಳು ಸಮೃದ್ಧವಾಗಿವೆ. ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ: ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ ಹಸಿರು ಕಡಲೆಯಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. ಹೃದಯವೂ ಆರೋಗ್ಯಕರವಾಗಿರುತ್ತದೆ. ಪ್ಲಾಂಟ್ ಸ್ಟೆರಾಲ್ ಸಿಟೊಸ್ಟೆರಾಲ್ ಸಹ ಹಸಿರು ಕಡೆಲೆಯಲ್ಲಿದ್ದು, ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯ: ಹಸಿರು ಕಡಲೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಕೂದಲಿಗೆ ಒಳಗಿನಿಂದ ಪೋಷಣೆ ದೊರೆಯುತ್ತದೆ. ಇದು ಕೂದಲು ಒಡೆಯುವಿಕೆ, ಉದುರುವುದು ಮತ್ತು ತೆಳುವಾಗುವುದನ್ನು ತಡೆಯುತ್ತದೆ.ನೆನೆಸಿದ ಹಸಿರು ಕಡಲೆಯನ್ನು ತಿನ್ನುವುದು ಬಹಳ ಪ್ರಯಜನಕಾರಿ. ಕಡಲೆ ಸೀಸನ್‌ನಲ್ಲಿ ಅದನ್ನು ಹಾಗೇ ಕೊಂಡು ಸೇವಿಸಬಹುದು. ಸೀಸನ್‌ ಇಲ್ಲದಿದ್ದಾಗ ಕಡಲೆಯನ್ನು ರಾತ್ರಿ ಒಂದು ಬೌಲ್‌ನಲ್ಲಿ ನೆನೆಸಿಡಿ. ಬೆಳಗ್ಗೆ ನೀರು ಬಸಿದಿಟ್ಟರೆ ಅದು ಮೊಳಕೆಯೊಡೆಯುತ್ತದೆ. ಆಗ ಸೇವನೆ ಮಾಡಿದರೆ ಬಹಳಷ್ಟು ಪ್ರಯೋಜನಗಳು ದೊರೆಯುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read