ನೂತನ ತಂತ್ರಜ್ಞಾನದ ಮೂಲಕ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರ ಚಿಕಿತ್ಸೆ

Healthy Kidney: Five reasons for kidney stone | Healthy Kidney : ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಈ ಐದು ತಪ್ಪು ಮಾಡಲೇಬೇಡಿ.! Health News in Kannada

ಶಿವಮೊಗ್ಗದ ಎನ್‌ಯು ಆಸ್ಪತ್ರೆಯ ವೈದ್ಯರು ಮೂವರಿಗೆ ನೂತನ ತಂತ್ರಜ್ಞಾನದ ಮೂಲಕ ಕಿಡ್ನಿ ಟ್ರಾನ್ಸ್‌ ಪ್ಲಾಂಟ್ (ಮೂತ್ರಪಿಂಡ ಕಸಿ)ನ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

ಈ ಕುರಿತು ಮಾಚೇನಹಳ್ಳಿಯಲ್ಲಿರುವ ಎನ್‌ಯು ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಪ್ರವೀಣ್ ಮಾಳವದೆ ಈ ಮೂರು ವಿಶೇಷ ಪ್ರಕರಣದಲ್ಲಿ ತಾಯಂದಿರೇ ತಮ್ಮ ಮಕ್ಕಳಿಗೆ ಕಿಡ್ನಿಯನ್ನು ದಾನ ಮಾಡಿದ್ದಾರೆ. ವಿವಿಧ ಕಾರಣಗಳಿಂದ ಕಿಡ್ನಿ ತೊಂದರೆಗೆ ಒಳಗಾಗಿದ್ದ ಮೂವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ರೋಗಿ ಮತ್ತು ಕಿಡ್ನಿ ದಾನ ಮಾಡಿದ ತಾಯಂದಿರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದರು.

ತಮ್ಮ 16ನೇ ವಯಸ್ಸಿನಲ್ಲಿಯೇ ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಕಿಡ್ನಿ ಕಾಯಿಲೆ ಕಾಣಿಸಿಕೊಂಡಿತ್ತು. ಇವರಿಗೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದರು. ಈಗ ಶಸ್ತ್ರ ಚಿಕಿತ್ಸೆ ನಡೆಸಿದ್ದು ಯುವಕನ ಬದುಕಿಗೆ ಹೊಸ ಭರವಸೆ ಮೂಡಿಸಲಾಗಿದೆ. ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಹುಟ್ಟಿನಿಂದಲೇ ಒಂದೇ ಕಿಡ್ನಿ ಹೊಂದಿದ್ದ ಬಾಲಕನಿಗೆ 11 ವರ್ಷವಿದ್ದಾಗ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ ಆ ರೋಗಿಯ ಕಿಡ್ನಿ ಆರೋಗ್ಯ ಹದಗೆಟ್ಟಿದ್ದರಿಂದ ಅನಿವಾರ್ಯವಾಗಿ ಕಿಡ್ನಿ ಕಸಿ ಮಾಡಬೇಕಾಯಿತು. ಈ ಪ್ರಕರಣದಲ್ಲಿ ಕೂಡ ಅವರ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದರು. ಇದೀಗ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ತಾಯಿ ಮತ್ತು ಮಗ ಇಬ್ಬರೂ ತೃಪ್ತಿದಾಯಕ ಜೀವನ ನಡೆಸುತ್ತಿದ್ದಾರೆ ಎಂದರು.

ಡಾ. ಪ್ರದೀಪ್ ಎಂ.ಜಿ. ಮಾತನಾಡಿ, ಮತ್ತೊಂದು ಪ್ರಕರಣವು ತುಂಬಾ ಅಪರೂಪದ ಪ್ರಕರಣವಾಗಿತ್ತು. ಈ ಪ್ರಕರಣದಲ್ಲಿ ಮೂರು ರಕ್ತನಾಳಗಳುಳ್ಳ ಕಿಡ್ನಿ ಹೊಂದಿದ್ದರಿಂದ ಕಿಡ್ನಿ ಟ್ರಾನ್ಸ್‌ ಪ್ಲಾಂಟ್ ಶಸ್ತ್ರ ಚಿಕಿತ್ಸೆ ಸವಾಲಿನದ್ದಾಗಿತ್ತು. ಆದರೆ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಕೂಡ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದರು ಎಂದರು.

ಹೀಗೆ ಮೇಲ್ಕಂಡ ಮೂರೂ ಪ್ರಕರಣಗಳು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ರೀತಿಯ ಸವಾಲಾಗಿತ್ತು. ಆದರೆ ಎನ್‌ಯು ಆಸ್ಪತ್ರೆಯ ಉನ್ನತ ಶ್ರೇಣಿಯ ವೈದ್ಯಕೀಯ ಆರೈಕೆ, ಸುಧಾರಿತ ಚಿಕಿತ್ಸಾ ಕ್ರಮ, ತಜ್ಞವೈದ್ಯರ ತಂಡ, ಅತ್ಯಾಧುನಿಕ ಸೌಲಭ್ಯ ಇರುವುದರಿಂದ ಇಂತಹ ಶಸ್ತ್ರ ಚಿಕಿತ್ಸೆಗಳು ಯಶಸ್ವಿಯಾಗಿವೆ ಎಂದರು.

ಇಂತಹ ಶಸ್ತ್ರ ಚಿಕಿತ್ಸೆಗಳಿಗೆ ತಗಲುವ ವೆಚ್ಚ ಹೆಚ್ಚಾಗಿರುತ್ತದೆ. ಆದರೆ ಸರ್ಕಾರದ ಕೆಲವು ಯೋಜನೆಗಳು ಮತ್ತು ಕಿಡ್ನಿ ದಾನ ಮಾಡುವವರ ಸಹಾಯದಿಂದ ಕೆಲವು ಚಾರಿಟೆಬಲ್ ಟ್ರಸ್ಟ್ ಗಳ ನೆರವಿನಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸವಾಗಿದೆ. ಬಹಳಷ್ಟು ಸಂಖ್ಯೆಗಳು ಮಧುಮೇಹದಿಂದಲೇ ಉಂಟಾಗುತ್ತದೆ. ಉತ್ತಮ ಜೀವನ ಶೈಲಿಯಿಂದ ಇದ್ನು ತಡಯಬಹುದಾಗಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಡಾ. ಕಾರ್ತಿಕ್ ಎಸ್.ಎಲ್, ಆಡಳಿತಾಧಿಕಾರಿ ಮಹಮ್ಮದ್ ರಫಿಕ್ ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read