ನೀವು ಕುಡಿಯುವ ನೀರಿನಲ್ಲಿದೆ ನಿಮ್ಮ ಆಯಸ್ಸು, ಜೀವಜಲ ದಿನಕ್ಕೆಷ್ಟು ಬೇಕು ಗೊತ್ತಾ…..?

ಸಂಶೋಧಕರು ದೀರ್ಘಕಾಲ ಬದುಕುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಬಹುಬೇಗನೆ ವಯಸ್ಸಾಗಲು, ನಮ್ಮ ಆಯಸ್ಸು ಕಡಿಮೆಯಾಗಲು ಪ್ರಮುಖ ಕಾರಣ ಡಿಹೈಡ್ರೇಶನ್‌. ಸರಿಯಾಗಿ ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಚೆನ್ನಾಗಿ ನೀರು ಕುಡಿದು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳುವವರು ನೀರು ಕುಡಿಯದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಇದಲ್ಲದೆ ನಿರ್ಜಲೀಕರಣವು ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಹೈಡ್ರೇಶನ್‌ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸತತ ಮೂರು ದಶಕಗಳ ಕಾಲ ಸುಮಾರು 11,000 ಕ್ಕೂ ಹೆಚ್ಚು ಜನರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ನೀರಿನ ಸೇವನೆ ಮತ್ತು ಡಿಹೈಡ್ರೇಶನ್‌ ಅನ್ನು ನಿರ್ಧರಿಸಲು ಸಂಶೋಧಕರು ಸೀರಮ್ ಸೋಡಿಯಂ ಪರೀಕ್ಷೆಯನ್ನು ಬಳಸಿದ್ದರು. ರಕ್ತದಲ್ಲಿ ಎಷ್ಟು ಸೋಡಿಯಂ ಇದೆ ಎಂಬುದನ್ನು ಇದು ಪರಿಶೀಲಿಸುತ್ತದೆ. ವ್ಯಕ್ತಿಯ ರಕ್ತದಲ್ಲಿ ಸೋಡಿಯಂನ ಸಾಮಾನ್ಯ ಮಟ್ಟವು ಪ್ರತಿ ಲೀಟರ್‌ಗೆ 135-145 ಎಂಎಂಒಎಲ್ ನಡುವೆ ಇರಬೇಕು.

ಸಂಶೋಧನೆಯ ಫಲಿತಾಂಶ

ಪ್ರತಿ ಲೀಟರ್‌ಗೆ 144 ಎಂಎಂಒಎಲ್‌ಗಿಂತ ಹೆಚ್ಚಿನ ಸೋಡಿಯಂ ಮಟ್ಟವು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪ್ರತಿ ಲೀಟರ್‌ಗೆ 142 ಎಂಎಂಒಎಲ್ ಅಥವಾ ಹೆಚ್ಚಿನ ಸೋಡಿಯಂ ಮಟ್ಟಗಳು ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ.ಇದರರ್ಥ ಸೀರಮ್ ಸೋಡಿಯಂ ಮಟ್ಟವು ಲೀಟರ್‌ಗೆ 142 ಎಂಎಂಒಎಲ್ ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿರುವ ಜನರು ಅಕಾಲಿಕವಾಗಿ ಸಾಯುವ ಅಥವಾ ದೀರ್ಘಕಾಲದ ಅನಾರೋಗ್ಯ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಸಂಶೋಧನೆಯ ಪ್ರಕಾರ ದೀರ್ಘಕಾಲದ ಡಿಹೈಡ್ರೇಶನ್‌ ನಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೈಡ್ರೇಟೆಡ್ ಆಗಿ ಉಳಿಯುವುದು ದೀರ್ಘಾವಧಿಯ ಜೀವನಕ್ಕೆ ಆರೋಗ್ಯಕರ ದೇಹಕ್ಕೆ ಅತ್ಯಂತ ಅವಶ್ಯಕ.

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಒಬ್ಬ ವ್ಯಕ್ತಿ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಯಾವುದೇ ನಿಗದಿತ ಮಿತಿಯಿಲ್ಲ. ತಜ್ಞರು ದಿನಕ್ಕೆ ಕನಿಷ್ಠ ಆರರಿಂದ ಎಂಟು ಗ್ಲಾಸ್ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. USನ ನ್ಯಾಷನಲ್ ಅಕಾಡೆಮಿ ಫಾರ್ ಸೈನ್ಸ್ ಇಂಜಿನಿಯರಿಂಗ್ ಮತ್ತು ಮೆಡಿಸಿನ್, ಪುರುಷರಿಗೆ 15 ಗ್ಲಾಸ್ ಮತ್ತು ಮಹಿಳೆಯರಿಗೆ 11.5 ಗ್ಲಾಸ್‌ ನೀರು ಕುಡಿಯಬೇಕೆಂದು ಶಿಫಾರಸು ಮಾಡಿದೆ. ಹೈಡ್ರೇಟೆಡ್ ಆಗಿರಲು ದಿನವಿಡೀ ಸಾಕಷ್ಟು ನೀರು ಮತ್ತು ಜ್ಯೂಸ್‌ ಕುಡಿಯಲು ಪ್ರಯತ್ನಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read