ನೀಲಗಿರಿ ಎಲೆಗಳಿಂದ ಉಸಿರಾಟದ ತೊಂದರೆ ದೂರ…..!

ನೀಲಗಿರಿ ಎಲೆಗಳಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ.

ನೀಲಗಿರಿ ಡ್ರಾಪ್ಸ್ ತಯಾರಿಸಿ ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ಮೂಗು ಕಟ್ಟುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಡ್ರಾಪ್ ಅನ್ನು ಮನೆಯಲ್ಲೇ ತಯಾರಿಸಬಹುದು.

ಪ್ಯಾನ್ ನಲ್ಲಿ ಅರ್ಧ ಲೀಟರ್ ನೀರನ್ನು ಕುದಿಯಲು ಇಡಿ. ನೀಲಗಿರಿ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ ಸೇರಿಸಿ. ಇಪ್ಪತ್ತು ನಿಮಿಷ ಕುದಿಯಲು ಬಿಡಿ. ಬಳಿಕ ಉಳಿದ ನೀರನ್ನು ಸೋಸಿ ಆರಿಸಿ. ಇದನ್ನು ಆರು ತಿಂಗಳ ತನಕ ಫ್ರಿಜ್ ನಲ್ಲಿಡಬಹುದು.

ಶೀತ ಕಫ ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಮೊದಲು ಒಂದು ಪಾತ್ರೆಯಲ್ಲಿ ನೀರಿಟ್ಟು ಕುದಿಸಿ. ಬಳಿಕ ಅದಕ್ಕೆ ಒಂದು ಚಮಚ ಸೋಸಿಟ್ಟ ನೀಲಗಿರಿ ಎಣ್ಣೆಯನ್ನು ಹಾಕಿ. ಅದರ ಘಮವನ್ನು ಒಳಗೆಳೆದುಕೊಳ್ಳಿ. ಬೆಡ್ ಶೀಟ್ ನಿಂದ ಕವರ್ ಮಾಡಿಕೊಳ್ಳಿ. ಸ್ಟೀಮ್ ಮೂಲಕ ಅದರ ಸುವಾಸನೆಯನ್ನು ಒಳಗೆಳೆದುಕೊಳ್ಳಿ. ಹೀಗೆ ದಿನಕ್ಕೆರಡು ಬಾರಿ ಮಾಡುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read