ನವದೆಹಲಿ: ಏರ್ ಇಂಡಿಯಾ ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 58 ರಿಂದ 65 ಕ್ಕೆ ಮತ್ತು ಇತರ ಎಲ್ಲಾ ಉದ್ಯೋಗಿಗಳಿಗೆ 58 ರಿಂದ 60 ಕ್ಕೆ ಏರಿಸಿದೆ.
ಮೂಲಗಳು ಹೇಳುವಂತೆ ಹಿಂದಿನ ವಿಸ್ತಾರ ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ವಿಸ್ತಾರಾ ಏರ್ ಇಂಡಿಯಾದೊಂದಿಗೆ ವಿಲೀನಗೊಂಡ ನಂತರ, ಪೈಲಟ್‌ಗಳ ನಿವೃತ್ತಿ ವಯಸ್ಸನ್ನು ಸಮಾನತೆ ತರಲು 65 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಸುಮಾರು 24,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 3,600 ಪೈಲಟ್‌ಗಳು ಮತ್ತು 9,500 ಕ್ಯಾಬಿನ್ ಸಿಬ್ಬಂದಿ ಸದಸ್ಯರು ಸೇರಿದ್ದಾರೆ. ಪೈಲಟ್‌ಗಳಂತೆಯೇ ಕ್ಯಾಬಿನ್ ಸಿಬ್ಬಂದಿ ಸದಸ್ಯರ ನಿವೃತ್ತಿ ವಯಸ್ಸನ್ನು 65 ಕ್ಕೆ ಏರಿಸಲಾಗಿದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಏರ್‌ಲೈನ್‌ನ ಟೌನ್‌ಹಾಲ್‌ನಲ್ಲಿ ಸಿಇಒ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯವು ವಾಣಿಜ್ಯ ಪೈಲಟ್‌ಗಳು 65 ವರ್ಷ ವಯಸ್ಸಿನವರೆಗೆ ಹಾರಾಟ ನಡೆಸಲು ಅವಕಾಶ ನೀಡುತ್ತದೆ.
ಹಿಂದಿನ ಏರ್ ಇಂಡಿಯಾ ಮತ್ತು ವಿಸ್ತಾರಾದ ಪೈಲಟ್ ಗಳಲ್ಲಿ ನಿವೃತ್ತಿ ವಯಸ್ಸಿನ ವ್ಯತ್ಯಾಸ ಸೇರಿದಂತೆ ಕೆಲವು ಸಮಸ್ಯೆಗಳ ಬಗ್ಗೆ ಅಸಮಾಧಾನವಿತ್ತು. ಆ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.